ಡಾ. ಹೆಗ್ಗಡೆಯವರಿಗೆ ಗೆಜ್ಜೆಗಿರಿ ಕ್ಷೇತ್ರದ ಗೌರವಾರ್ಪಣೆ

0

ಪುತ್ತೂರು: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ವತಿಯಿಂದ ಜು.18ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಭಿನಂದಿಸಲಾಯಿತು.

ಗೆಜ್ಜೆಗಿರಿಯಲ್ಲಿ ಔಷಧೀಯ ವನ, ಗಿಡ ಮೂಲಿಕೆ ಮತ್ತು ಆಯುರ್ವೇದ ಔಷಧ ಉತ್ಪಾದನೆ, ಯಕ್ಷಗಾನ ಮೇಳ ಮುಂತಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಕ್ಷೇತ್ರಾಡಳಿತ ಸಮಿತಿಯ ಜತೆ ವಿಚಾರ ವಿನಿಮಯ ನಡೆಸಿದರು. ಜಿಲ್ಲೆಯ ಹೆಸರಾಂತ ಪುಣ್ಯ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗೆಜ್ಜೆಗಿರಿಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷ ಜಯಂತ ನಡುಬೈಲ್, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಕಾರ್ಯಕಾರಿ ಸದಸ್ಯರಾದ ಸೂರ್ಯಕಾಂತ್ ಜಯ ಸುವರ್ಣ, ನವೀನ್ ಸುವರ್ಣ, ವಕ್ತಾರ ರಾಜೇಂದ್ರ ಚಿಲಿಂಬಿ, ಪ್ರಮುಖರಾದ ಶೇಖರ ಬಂಗೇರ, ಜನಾರ್ದನ ಪೂಜಾರಿ ಪಡುಮಲೆ, ನಿತ್ಯಾನಂದ ನಾವರ, ನಾರಾಯಣ ಪೂಜಾರಿ ಮಚ್ಚಿನ, ಯಕ್ಷಗಾನ ಮೇಳದ ನಿತಿನ್ ಕುಮಾರ್ ತೆಂಕಕಾರಾಂದೂರು, ಗಿರೀಶ್ ರೈ ಕಕ್ಕೆಪದವು, ಸುರೇಶ್ ಪೂಜಾರಿ, ಶಶಿಕಿರಣ್ ಕಾವು, ಜಗದೀಶ್ ಕಜೆಕಾರ್, ವಸಂತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here