ಅಲ್ ಅಮೀನ್ ಪೆರುವಾಯಿ(ಯುಎಇ) ವಾರ್ಷಿಕೋತ್ಸವ- ಪದಾಧಿಕಾರಿಗಳ ನೇಮಕ

0

ಅಧ್ಯಕ್ಷ : ರಿಯಾಝ್ ಮುಚ್ಚಿರಪದವು, ಪ್ರ.ಕಾರ್ಯದರ್ಶಿ: ಸಮೀರ್ ದರ್ಖಾಸ್

ಪುತ್ತೂರು : ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿಯ 8ನೇ ವಾರ್ಷಿಕ ಮಹಾಸಭೆ, ಈದ್ ಮಿಲನ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಶಾರ್ಜಾದ ಅಲ್ ಫರೀಜ್ ರೆಸ್ಟೋರೆಂಟ್ ಅಡಿಟೋರಿಯುಮ್‌ನಲ್ಲಿ ನಡೆಯಿತು. ಕಳೆದ ̇8 ವರುಷಗಳಿಂದ ಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ, ಸೂರಿಲ್ಲದ ನಿರ್ಗತಿಕ ಕುಟುಂಬಕ್ಕೆ ಆಶ್ರಯ ಕಲ್ಪಿಸುವ, ಶಿಕ್ಷಣ ಉತ್ತೇಜನ ಕಾರ್ಯಕ್ರಮ ಮತ್ತು ಪ್ರೋತ್ಸಾಹ, ಬಡ ನಿರ್ಗತಿಕ ಕುಟುಂಬಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಸಹಾಯ, ಪ್ರಕೃತಿ ವಿಕೋಪ ಸಂದರ್ಭ ಸಹಾಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಪೆರುವಾಯಿಯ ಅನಿವಾಸಿ ಭಾರತೀಯ ಸಹೃದಯಗಳು ಒಟ್ಟು ಸೇರಿಕೊಂಡು ರಚಿಸಿದ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿಯು 8ನೇ ವರುಷದ ಸಂಭ್ರಮಾಚಣೆಯಲ್ಲಿದೆ.

ಸಮೀರ್ ದರ್ಖಾಸ್ ಪೆರುವಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಉಪಾಧ್ಯಕ್ಷ ಹಮೀದ್ ಹಾಜಿ ದೈಗೋಳಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇಬ್ರಾಹಿಂ ಮುಚ್ಚಿರಪದವು, ಅಝೀಝ್ ದಂಡೆಪುಣಿ, ಹಮೀದ್ ಕುಂಬ್ಲೆ, ಶಾಫಿ ಮುಚ್ಚಿರಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯು ಮುಂದಿನ ಒಂದು ವರ್ಷದಲ್ಲಿ ಕೈಗೊಳ್ಳಬೇಕಾದ ಸಮುದಾಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಈ ಸಂದರ್ಭದಲ್ಲಿ ತಯಾರಿಸಲಾಯಿತು.

ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ : ಸಮಿತಿಯ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿಯಾಜ್ ಮುಚ್ಚಿರ ಪದವು, ಗೌರವಾಧ್ಯಕ್ಷರಾಗಿ ಇಬ್ರಾಹಿಂ ಮುಚ್ಚಿರ ಪದವು, ಉಪಾಧ್ಯಕ್ಷ ರಾಗಿ ಇಬ್ರಾಹೀಂ ಮುಳಿಯ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ದರ್ಖಾಸ್ ಪೆರುವಾಯಿ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಹಾಜಿ ದೈಗೋಳಿ ಹಾಗೂ ಬಾತಿಶ್ ಕಾನ ಪೆರುವಾಯಿ, ಕೋಶಾಧಿಕಾರಿ ಯಾಗಿ ಮೂಸ ಸೇನೆರಪಾಲು, ರಿಸೀವರ್ಸ್‌ಗಳಾಗಿ ಶಿಹಾಬ್ ದುಬೈ, ಹನೀಫ್ ದಂಡೆಪುಣಿ ಮತ್ತು ಶರಫುದ್ದೀನ್ ಬಡಿಯಡ್ಜರವರನ್ನು ಆಯ್ಕೆ ಮಾಡಲಾಯಿತು.

ನಾಡಿನ ಸಾಧಕರಿಗೆ ಗೌರವಾರ್ಪಣೆ : ಶಿಕ್ಷಣ ಹಾಗೂ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆಯಿಗೈದ ಮಹಮ್ಮದ್ ಪೆರುವಾಯಿರವರಿಗೆ ಅಲ್ ಅಮೀನ್ ಸಮಿತಿ ಕಡೆಯಿಂದ ಗೌರವಾರ್ಪಣ ಮಾಡಿ ಸನ್ಮಾನಿಸಲಾಯಿತು. ಗೌರವ ಸ್ವೀಕಾರ ಸ್ವೀಕರಿಸಿ ಮಾತಾಡಿದ ಮಹಮ್ಮದ್ ಪೆರುವಾಯಿರವರು ಅಲ್ ಅಮೀನ್ ಸಮಿತಿಯು ಸಾಮುದಾಯಿಕ ಅಭಿವೃದ್ಧಿ ಕಾರ್ಯ, ಶಿಸ್ತುಬದ್ಧ ಸದಸ್ಯರ ಪಾಲುದಾರಿಕೆ ಬಗ್ಗೆ ಶ್ಲಾಘಿಸಿ ಶುಭ ಹಾರೈಸಿದರು.

ಶಾಫಿ ಮುಚ್ಚಿರ ಪದವು ಸ್ವಾಗತಿಸಿದರು. ಸಿದ್ದೀಕ್ ಕಾನ ವಂದಿಸಿದರು. ಆರೀಫ್ ಕುಂಬಳಕೊಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here