ಲಿಯೋ ಕ್ಲಬ್ ಪುತ್ತೂರ್‍ದ ಮುತ್ತು:ಅಧ್ಯಕ್ಷೆಯಾಗಿ ರಂಜಿತಾ ಶೆಟ್ಟಿ, ಕಾರ್ಯದರ್ಶಿ:ಲೆರಿಸ್ಸ ಮಸ್ಕರೇನ್ಹಸ್, ಕೊಶಾಧಿಕಾರಿ:ಶ್ರೀಕರ್ ಶೆಣೈ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಪ್ರವರ್ತಿಸಿದ ಲಿಯೋ ಕ್ಲಬ್ ಪುತ್ತೂರ್‍ದ ಮುತ್ತು ಇದರ2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ರಂಜಿತಾ ಶೆಟ್ಟಿಯವರು ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಪುನರಾಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್, ಕೋಶಾಧಿಕಾರಿಯಾಗಿ ಶ್ರೀಕರ್ ಶೆಣೈಯವರು ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರಥಮ ಉಪಾಧ್ಯಕ್ಷರಾಗಿ ಧೀರೆನ್, ದ್ವಿತೀಯ ಉಪಾಧ್ಯಕ್ಷರಾಗಿ ಅಂಕಿತ್ ರೈ, ನಿರ್ದೇಶಕರುಗಳಾಗಿ ಸುನಿತ್ ಪಟೇಲ್, ಕೀರ್ತಿ, ಅಕ್ಷತಾ ದೇವಾಡಿಗ, ಭುವನ್, ರೋಶನ್, ಕೀರ್ತನಾ, ಬಿ.ದಿವಿತ್ ರೈರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷೆಯ ಪರಿಚಯ:
ಕ್ಲಬ್‌ನ ಸ್ಥಾಪಕಾಧ್ಯಕ್ಷರಾಗಿ, ಪ್ರಸ್ತುತ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ರಂಜಿತಾ ಶೆಟ್ಟಿಯವರು ಲಯನ್ ಪ್ರಾಂತ್ಯ-೭ರ ನಿಕಟಪೂರ್ವ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರ ಪುತ್ರಿ. ಇವರು ಸುದಾನ ವಸತಿಯುತ ಶಾಲೆ ಹಾಗೂ ಅಂಬಿಕಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಕೆ.ವಿ.ಜಿ ದಂತ ಮಹಾ ವಿದ್ಯಾಲಯದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿನಿಯಾರುತ್ತಾರೆ. ಇವರು ಲಿಯೋ ಜಿಲ್ಲಾ ಕ್ಯಾಬಿನೆಟ್‌ನಲ್ಲಿ ಜಿಎಸ್‌ಟಿ ಕೋ-ಆರ್ಡಿನೇಟರ್ ಆಗಿಯೂ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯದರ್ಶಿಯ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್‌ರವರು ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಮಂಗಳೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಪ್ರಿಯಲತಾ ಡಿ’ಸಿಲ್ವರವರು ಪುತ್ರಿ. ಲೆರಿಸ್ಸರವರು ಕ್ಲಬ್‌ನ ಸ್ಥಾಪಕ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಹಾಗೂ ಅಂಬಿಕಾ ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ. ಪ್ರಸ್ತುತ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಬಿ-ಫಾರ್ಮಾ ವ್ಯಾಸಂಗ ಮಾಡುತ್ತಿದ್ದಾರೆ.

ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಶ್ರೀನಿಧಿ ಸ್ಟೋರ್‍ಸ್ ಮಾಲಕ ಗಣೇಶ್ ಶೆಣೈ ಹಾಗೂ ಗೀತಾ ಶೆಣೈ ದಂಪತಿ ಪುತ್ರರಾಗಿರುವ ಶ್ರೀಕರ್ ಶೆಣೈಯವರು ಸಂತ ಫಿಲೋಮಿನಾ ಪ್ರೌಢಶಾಲೆ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ. ಪ್ರಸ್ತುತ ಇವರು ತಂದೆಯ ಶ್ರೀನಿಧಿ ಸ್ಟೋರ್‍ಸ್‌ನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು ಜೊತೆಗೆ ಬ್ಯಾಡ್ಮಿಂಟನ್ ತರಬೇತುದಾರರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here