ಕೆ.ಐ.ಸಿ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷ: ಅಶ್ರಫ್ ರಹ್ಮಾನಿ, ಪ್ರ.ಕಾರ್ಯದರ್ಶಿ; ಸ್ವಾಲಿಹ್ ಕೌಸರಿ, ಕೋಶಾಧಿಕಾರಿ: ಉಬೈದುಲ್ಲಾ

ಪುತ್ತೂರು: ಕುಂಬ್ರ: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ.ಐ.ಸಿ) ಕುಂಬ್ರ ಇದರ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಕೆಐಸಿ ಹಿಫ್ಝ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಕೌಸರೀಸ್ ರಾಜ್ಯಾಧ್ಯಕ್ಷ ಅಬ್ದುನ್ನಾಸಿರ್ ಕೌಸರಿ ತಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಅನೀಸ್ ಕೌಸರಿ ವೀರಮಂಗಲ ಉದ್ಘಾಟಿಸಿ ಸಂಸ್ಥೆಯ ಬಗ್ಗೆ ವಿವರಿಸಿದರು. ಸಂಘಟನಾ ಕಾರ್ಯದರ್ಶಿ ಸತ್ತಾರ್ ಕೌಸರಿ ವರದಿ ಮತ್ತು ಆಯವ್ಯಯ ಮಂಡಿಸಿದರು.

ಇಸಾಕ್ ಕೌಸರಿ, ಅಶ್ರಫ್ ರಹ್ಮಾನಿ, ಅಹ್ಮದ್ ಸ್ವಾಲಿಹ್ ಕೌಸರಿ, ಹಾಶಿಂ ತೋಡಾರ್ ಶುಭ ಹಾರೈಸಿದರು. ನಂತರ ನೂತನ ಸಮಿತಿಯ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ರಫ್ ರಹ್ಮಾನಿ ವೀರಮಂಗಲ, ಉಪಾಧ್ಯಕ್ಷರುಗಳಾಗಿ ಸ್ವಾದಿಖ್ ಕಂಬಳಬೆಟ್ಟು, ಶಾಹುಲ್ ಹಮೀದ್ ಐವರ್ನಾಡು, ಇಸ್ಮಾಯಿಲ್ ನಾವುಂದ, ಹನೀನ್ ಕಲಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಸ್ವಾಲಿಹ್ ಕೌಸರಿ ಮಂಡಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸತ್ತಾರ್ ಕೌಸರಿ ಕಲ್ಲಗುಡ್ಡೆ, ಕಾರ್ಯದರ್ಶಿಗಳಾಗಿ ಅಝೀಝ್ ಬೆಳ್ಳಾರೆ, ಅನ್ವರ್ ಹುಸೈನ್ ಕುಕ್ಕಾಜೆ, ಮೂಸ ಸಹದ್ ಕುಂಬ್ರ, ಕೋಶಾಧಿಕಾರಿಯಾಗಿ ಉಬೈದುಲ್ಲಾ ಗಂಡಿಬಾಗಿಲು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನೀಸ್ ಕೌಸರಿ ವೀರಮಂಗಲ, ಜಾಬಿರ್ ಫೈಝಿ ಬನಾರಿ, ನಾಸಿರ್ ಕೌಸರಿ ತಲಕ್ಕಿ, ಯಾಸಿರ್ ಕೌಸರಿ ಕೂಡುರಸ್ತೆ, ಹಾಶಿಂ ತೋಡಾರ್, ಇಸಾಕ್ ಕೌಸರಿಯವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಜಾಬಿರ್ ಫೈಝಿ ಬನಾರಿ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಅಹ್ಮದ್ ಸ್ವಾಲಿಹ್ ಕೌಸರಿ ವಂದಿಸಿದರು.

LEAVE A REPLY

Please enter your comment!
Please enter your name here