ನಿತ್ಯ ಫುಡ್ ಪ್ರಾಡಕ್ಟ್‌ಗೆ `ಇನ್ನೋವೇಟಿವ್ ಲೀಡರ್‌ಶಿಪ್ ಆಫ್ ದಿ ಇಯರ್’ ಪ್ರಶಸ್ತಿ

0

ಪುತ್ತೂರು: ದಕ್ಷಿಣ ಭಾರತದ ವಿವಿಧ ಸಂಸ್ಥೆಗಳಿಗೆ ಮತ್ತು ಸಾಧಕರಿಗೆ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆ ಕಾರ್ಯಕ್ರಮದಲ್ಲಿ ವಲಯ ಪಿ.ಅರ್. ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಸಾಧಕರಿಗೆ ರಾಜ್ಯ ಪಿ.ಆರ್.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಕ್ವೆಯಲ್ಲಿರುವ ನಿತ್ಯ ಫುಡ್ ಪ್ರಾಡಕ್ಟ್ ಸಂಸ್ಥೆಗೆ `ಇನ್ನೋವೇಟಿವ್ ಲೀಡರ್‌ಶಿಪ್ ಆಫ್ ದಿ ಇಯರ್-2022′ ಪ್ರಶಸ್ತಿ ಲಭಿಸಿದೆ.

 


ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜು.16 ರಂದು ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಮ್ಹಾಲಕ ರಾಧಾಕೃಷ್ಣ ಇಟ್ಟಿಗುಂಡಿ ಪ್ರಶಸ್ತಿ ಸ್ವೀಕರಿಸಿದರು. ರಾಧಾಕೃಷ್ಣ ಇಟ್ಟಿಗುಂಡಿಯವರ ಪತ್ನಿ ಉಮಾವತಿ, ಮಕ್ಕಳಾದ ನಿಧಿ ಮತ್ತು ನಿತ್ಯಾ, ಪ್ರೊಡೆಕ್ಷನ್ ಮ್ಯಾನೇಜರ್ ವೆಂಕಟೇಶ್ ಮಾರ್ಕೆಟಿಂಗ್ ಮ್ಯಾನೇಜರ್ ಕಿರಣ್, ಮಾರ್ಕೆಟಿಂಗ್‌ನ ಶಶಿಕುಮಾರ್ ಮತ್ತು ನೇಮಿಚಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here