ಜಿಲ್ಲಾಮಟ್ಟದ ಈಜು ಸ್ಪರ್ಧೆ: ಫಿಲೋಮಿನಾ ಶಾಲೆಯ ಲಿಖಿತ್ ರಾಮಚಂದ್ರ ರಾಜ್ಯಮಟ್ಟಕ್ಕೆ

0

ಪುತ್ತೂರು: ಪರ್ಲಡ್ಕ ಡಾ|ಶಿವರಾಮ ಕಾರಂತ ಈಜುಕೊಳದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ಲಿಖಿತ್ ರಾಮಚಂದ್ರರವರು 2 ಚಿನ್ನ ಮತ್ತು 1 ಬೆಳ್ಳಿ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮತ್ತು 14 ವರ್ಷ ವಯೋಮಿತಿಯೊಳಗಿನ ಬಾಲಕರ ಫ್ರೀಸ್ಟೈಲ್ ರಿಲೇ ತಂಡಕ್ಕೆ ಸಹ ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ದ.ಕ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ಸಹಯೋಗದೊಂದಿಗೆ ಈ ಸ್ಪರ್ಧೆ ನಡೆದಿತ್ತು. ಲಿಖಿತ್ ರಾಮಚಂದ್ರರವರು ಜು.17 ರಂದು ಹಾಸನದಲ್ಲಿ ಡಿಪಾರ್ಟ್ಮೆಂಟ್ ಓಫ್ ಯೂತ್ ಎಂಪವರ್‌ಮೆAಟ್ ಆಂಡ್ ಸ್ಪೊರ್ಟ್ಸ್ ವತಿಯಿಂದ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 100ಮೀ ಮೆಡ್ಲೆ ರಿಲೇ ಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವರು ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರು ಆದ ರಾಮಚಂದ್ರ ಎ ಹಾಗೂ ದೀಪಾರಾಣಿ ಯವರ ಪುತ್ರ.

ಇವರು ಡಾ| ಶಿವರಾಮ ಕಾರಂತ ಬಾಲವನ ಪುತ್ತೂರು ಇಲ್ಲಿನ ಪುತ್ತೂರು ಅಕ್ವಾಟಿಕ್ ಕ್ಲಬ್‌ನಲ್ಲಿ ಪಾರ್ಥ ವಾರಣಾಸಿ, ನಿರೂಪ್, ದೀಕ್ಷಿತ್ ರಾವ್ ಹಾಗು ರೋಹಿತ್ ರವರಿಂದ ಈಜು ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here