ರಾಮಕುಂಜ: ಕವನ ರಚನಾ ಕಮ್ಮಟ ಉದ್ಘಾಟನೆ

0

ಕವನ ಬರೆಯುತ್ತಾ ಹೋದಂತೆ ಪ್ರತಿಭೆಯೂ ವಿಕಾಸವಾಗುತ್ತದೆ: ವಿ.ಬಿ.ಅರ್ತಿಕಜೆ

ರಾಮಕುಂಜ: ಸತತ ಪ್ರಯತ್ನದಿಂದ ಮಾತ್ರ ನಮ್ಮಲ್ಲಿರುವ ಕವನ ರಚನಾ ಸಾಮರ್ಥ್ಯ ಇಮ್ಮಡಿಯಾಗಲು ಸಾಧ್ಯ, ಕವನಗಳನ್ನು ಬರೆಯುತ್ತಾ ಹೋದಂತೆ ನಮ್ಮ ಪ್ರತಿಭೆಯೂ ವಿಕಾಸವಾಗುತ್ತಾ ಹೋಗುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಅಂಕಣಕಾರರೂ ಆದ ವಿ.ಬಿ ಅರ್ತಿಕಜೆ ಹೇಳಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಮತ್ತು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಆಶ್ರಯದಲ್ಲಿ ರಾಮಕುಂಜ ಮಹಾವಿದ್ಯಾಲಯದಲ್ಲಿ ನಡೆದ ಕವನ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ರೈಯವರು ಮಾತನಾಡಿ, ಪ್ರತಿಯೊಬ್ಬರಲ್ಲೂ ವಿಭಿನ್ನ ರೀತಿಯ ಪ್ರತಿಭೆ ಇರುತ್ತದೆ. ಆದರೆ ನಮ್ಮಲ್ಲಿರುವ ಪ್ರತಿಭೆಯ ಅರಿವು ನಮಗಿರುವುದಿಲ್ಲ. ಅದನ್ನು ಅರಿತು ಮುನ್ನಡೆದಾಗ ಅದೇ ನಮ್ಮ ಸಾಧನೆಯ ಹಾದಿಯಾಗಿರುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಅಧ್ಯಕ್ಷ ಸೇಸಪ್ಪ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಕಾರ್ಯಕ್ರಮದ ಸಂಯೋಜಕಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ, ಪ.ಪೂ ಕಾಲೇಜಿನ ವಿದ್ಯಾರ್ಥಿಗಳು, ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಅಮೃತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ವಿಜಿತಾ ಸ್ವಾಗತಿಸಿ, ಪ್ರಥಮ ಬಿ.ಎ.ಯ ಚೈತನ್ಯ ವಂದಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಸುಷ್ಮಾ ಎಸ್.  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here