ಬ್ಯಾಡ್ಮಿಂಟನ್ ಪಂದ್ಯಾಟ : ದರ್ಬೆ ಬೆಥನಿ ಆ.ಮಾ.ಶಾಲಾ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಪುತ್ತೂರು ಅಫೀಸರ‍್ಸ್ ಕ್ಲಬ್‌ನಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಗಗನ್‌ದೀಪ್ ಬಿ.ಎಮ್., ಪ್ರಥಮ್ ಕಶ್ಯಪ್ ಕೆ.ಬಿ., ಮನ್ವಿತ್ ಎ.ಎನ್., ಬಿ.ಬಿ.ಅನ್ವಿತ್ ರೈ, ನಿಧಿತ್ ಗೌಡ, ನಿಹಾರಿಕಾ ಪಿ., ನಿಹಾನಿ ಮುತ್ಲಾಜೆ, ಬೃಂದಾ ಪಿ.,ರವರು ಭಾಗವಹಿಸಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸೆಲಿನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here