ಸುದ್ದಿ ಬಿಡುಗಡೆ ಪತ್ರಿಕೆಗೆ ದಕ್ಷಿಣ ಭಾರತದ `ಉತ್ತಮ ಪ್ರಾದೇಶಿಕ ಪತ್ರಿಕೆ’ ಪ್ರಶಸ್ತಿ

0


ಮಂಗಳೂರು: ದಕ್ಷಿಣ ಭಾರತದ ವಿವಿಧ ಸಂಸ್ಥೆಗಳಿಗೆ ಮತ್ತು ಸಾಧಕರಿಗೆ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆ ಕಾರ್ಯಕ್ರಮದಲ್ಲಿ ವಲಯ ಪಿ.ಅರ್. ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಸಾಧಕರಿಗೆ ರಾಜ್ಯ ಪಿ.ಆರ್.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಗೆ “ದಕ್ಷಿಣ ಭಾರತ ಮಟ್ಟದ ಉತ್ತಮ ಪ್ರಾದೇಶಿಕ ಪತ್ರಿಕೆ” ಪ್ರಶಸ್ತಿ ಲಭಿಸಿದೆ.


ಜು.16ರಂದು ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಪ್ರಧಾನ ಸಂಪಾದಕರೂ ಆಗಿರುವ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮತ್ತು ಬಳಗದವರು ಪಿ.ಆರ್.ಸಿ.ಐ ರಾಷ್ಟ್ರೀಯ ಅಧ್ಯಕ್ಷ ಡಾ| ಟಿ.ವಿನಯಕುಮಾರ್ ಮತ್ತು ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ರವಿ, ವೈ.ಸಿ.ಸಿ.ಅಧ್ಯಕ್ಷ ಎಂ.ಬಿ.ಜಯರಾi, ಯೆನಪೊಯ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಯಂ. ವಿಜಯ್ ಕುಮಾರ್, ವೈ.ಸಿ.ಸಿ. ರಾಷ್ಟ್ರೀಯ ಮುಖ್ಯಸ್ಥ ಚಿನ್ಮಯಿ ಪ್ರವೀಣ್, ಪಿ.ಆರ್.ಸಿ.ಐ. ದಕ್ಷಿಣ ವಲಯ ಅಧ್ಯಕ್ಷೆ ಡಾ.ಟಿ.ಎಸ್.ಲತಾ, ಪಿ.ಅರ್ ಸಿ.ಐ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಪಶುಪತಿ ಶರ್ಮ ಉಪಸ್ಥಿತರಿದ್ದರು. ಮಂಗಳೂರು ವಲಯ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕೆನ್ಯೂಟ್ ಜೀವನ್ ಪಿಂಟೋ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭ ನವೆಂಬರ್‌ನಲ್ಲಿ ಕೊಲ್ಕತ್ತದಲ್ಲಿ ನಡೆಯಲಿರುವ ಪಿ.ಆರ್.ಸಿ.ಐ ೧೬ನೇ ಜಾಗತಿಕ ಸಂವಹನ ಸಮಾವೇಶದ ಥೀಮ್ ಲೋಗೊವನ್ನು ಬಿಡುಗಡೆಗೊಳಿಸಲಾಯಿತು.
ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಡಾ.ಯು.ಪಿ.ಶಿವಾನಂದರ ಜೊತೆ ಸುದ್ದಿ ಪುತ್ತೂರು ಸಿಇಒ ಸೃಜನ್ ಊರುಬೈಲು, ಬೆಳ್ತಂಗಡಿ ಸುದ್ದಿ ಸಿಇಒ ಸಿಂಚನಾ ಊರುಬೈಲು, ಬೆಳ್ತಂಗಡಿ ಸುದ್ದಿ ವ್ಯವಸ್ಥಾಪಕ ಮಂಜುನಾಥ ರೈ, ಸುದ್ದಿ ಬೆಳ್ತಂಗಡಿ ವರದಿಗಾರ ಸಂತೋಷ್ ಪಿ.ಕೋಟ್ಯಾನ್, ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೊಲೆ, ಬೆಳ್ತಂಗಡಿ ಸುದ್ದಿ ಚಾನೆಲ್ ನಿರೂಪಕ ಆದಿತ್ಯ ರಾವ್ ದೊಂಡೊಲೆ, ಸುದ್ದಿ ಮಂಗಳೂರು ವರದಿಗಾರರಾದ ಭಾಸ್ಕರ ರೈ ಕಟ್ಟ, ಮಹಮ್ಮದ್ ಪೆರುವಾಯಿ, ಸುದ್ದಿ ಬಂಟ್ವಾಳದ ವರದಿಗಾರ ರಾಜ ಬಂಟ್ವಾಳ, ಸುದ್ದಿ ಜಿಲ್ಲಾ ಪ್ರತಿನಿಧಿಗಳ ಮುಖ್ಯಸ್ಥ ರಾಜೇಶ್ ಎಂ.ಎಸ್., ಪುತ್ತೂರು ಸುದ್ದಿ ಚಾನೆಲ್ ನಿರೂಪಕ ಗೌತಮ್ ಶೆಟ್ಟಿ ಇರಾ, ಸಿಬ್ಬಂದಿಗಳಾದ ಕುಶಾಲಪ್ಪ, ಸಚಿನ್ ಶೆಟ್ಟಿ, ಸುಳ್ಯ ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ವರದಿಗಾರರಾದ ಈಶ್ವರ ವಾರಣಾಸಿ, ಶಿವಪ್ರಸಾದ್ ಆಲೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸುದ್ದಿ ಚಾನೆಲ್‌ನಲ್ಲಿ ಹಾಗೂ ನ್ಯೂಸ್ ಕರ್ನಾಟಕದಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ವಿವಿಧ ಸಂಸ್ಥೆಗಳಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ
ದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳಿಗೆ ಹಾಗೂ ಸಾಧಕರಿಗೆ ದಕ್ಷಿಣ ಭಾರತ ಮಟ್ಟದ, ರಾಜ್ಯ ಮಟ್ಟದ ಮತ್ತು ವಲಯ ಮಟ್ಟದ ಪಿಆರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದಕ್ಷಿಣ ಭಾರತ ಮಟ್ಟದ ಪಿಆರ್ ಪ್ರಶಸ್ತಿಯನ್ನು ಈಜು ಪಟು ರಜನಿ ಲಕ್ಕಾ ಬಳ್ಳಾರಿ, ರಿಜ್ವನ್ ಅಹ್ಮದ್ ಚೆನ್ನೈ, ಶ್ರೀ ಸಾಯಿ ಸಂಜೀವಿನಿ ಕೇರಳ, ನೊವೆಲ್ ರಾಬಿನ್‌ಸನ್, ಯು.ಸುಧೀರ್ ಲೋದಾರಿಗೆ ನೀಡಲಾಯಿತು.ರಾಜ್ಯ ಮಟ್ಟದ ಪಿಆರ್ ಪ್ರಶಸ್ತಿಯನ್ನು ಹೊಟೇಲ್ ಓಷಿಯನ್ ಪರ್ಲ್, ಕೆಐಒಸಿಎಲ್ ಹಿರಿಯ ಪ್ರಬಂಧಕ ಮತ್ತು ಪಿಆರ್‌ಒ ಮುರುಗೇಶ್,ಸ್ವಾದಿಷ್ಟ ಫುಡ್ಸ್‌ನ ನವೀನ್, ಬ್ಯುಟಿಷಿಯನ್ ಚೇತನಾ, ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಮಂಗಳೂರು ಹಾಗೂ ವಲಯ ಮಟ್ಟದ ಪಿಆರ್ ಪ್ರಶಸ್ತಿಯನ್ನು ಎಂಆರ್‌ಪಿಎಲ್ ಅಮ್ಮುಂಜೆ ಸುಮತ ನಾಯಕ್, ಪತ್ರಕರ್ತ ವಿಶ್ವವಾಣಿಯ ವಿಶ್ವೇಶ್ವರ ಭಟ್, ಚೆನ್ನೈಯ ಪತ್ರಕರ್ತ ಕಲ್ಯಾಣ ರಾಮನ್,ಪಿ.ಟಿ.ದೇವಾನಿಕುಟ್ಟಿ ಕೇರಳರವರಿಗೆ ನೀಡಲಾಯಿತು.

 


ಸಾರ್ವಜನಿಕ ಸಂಪರ್ಕ ವಲಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ವೇಗವಾಗಿ ಬೆಳೆಯುತ್ತಿದೆ, ಜೊತೆಗೆ ಸವಾಲುಗಳನ್ನು ಹೊಂದಿದೆ. ಸಾರ್ವಜನಿಕ ಸಂವಹನದ ಇಂದಿನ ಪ್ರತಿನಿತ್ಯದ ಚಟುವಟಿಕೆಗಳಲ್ಲೂ ಹಾಸುಹೊಕ್ಕಾಗಿದೆ. ಈ ಹಿನ್ನೆಲೆಯಲ್ಲಿ ಪರಿಶ್ರಮ, ಪಾರದರ್ಶಕತೆ ಯೊಂದಿಗೆ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಸವಾಲುಗಳನ್ನು ಎದುರಿಸಬೇಕಾಗಿದೆ. -ಡಾ.ಬಿ.ಕೆ.ರವಿ., ಮುಖ್ಯಸ್ಥರು, ಸಂವಹನ ಅಧ್ಯಯನ ವಿಭಾಗ ಬೆಂಗಳೂರು ವಿಶ್ವ ವಿದ್ಯಾಲಯ

ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿ ಸಂವಹನದ ಅಗತ್ಯವಿದೆ, ಆದರೆ ಸಮರ್ಪಕ ಸಂವಹನ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಯೂ ಎಚ್ಚರಿಕೆ ಅಗತ್ಯವಿದೆ.ಡಾ.ಯಂ. ವಿಜಯ್ ಕುಮಾರ್, ಉಪ ಕುಲಪತಿ, ಯೆನಪೊಯ ವಿಶ್ವ ವಿದ್ಯಾಲಯ

ಸತ್ಯ, ನಂಬಿಕೆ, ಪಾರದರ್ಶಕತೆ ಸಾರ್ವಜನಿಕ ಸಂಪರ್ಕದ ಪ್ರಮುಖ ಧ್ಯೇಯವಾಗಿದೆ. ಪರಿಣಾಮಕಾರಿ ಸಂವಹನಕ್ಕೆ ಅಗತ್ಯ. ಡಿಜಿಟಲ್ ತಂತ್ರಜ್ಞಾನದ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.ಡಾ|ಟಿ.ವಿನಯ ಕುಮಾರ್, ರಾಷ್ಟ್ರೀಯ ಅಧ್ಯಕ್ಷ ಪಿ.ಆರ್.ಸಿ.ಐ

ಸಾರ್ವಜನಿಕ ಸಂಪರ್ಕದ ಚಟುವಟಿಕೆ ನಮ್ಮ ಮನೆಯಿಂದಲೇ ಆರಂಭಗೊಂಡು ಎಲ್ಲಾ ಕ್ಷೇತ್ರ ವನ್ನು ಆವರಿಸಿದೆ.ಇಂತಹ ಮಹತ್ವದ ಕ್ಷೇತ್ರದ ಮೂಲಕ ಸಾರ್ವಜನಿಕ ಸೇವೆಯ ಮೂಲಕ ಸಮಾಜಕ್ಕೆ ಸಾರ್ವಜನಿಕ ಸಂಸ್ಥೆ ದೇಶ ವಿದೇಶದಲ್ಲಿ ಜನರಿಗೆ ನೆರವಾಗುತ್ತಿದೆ ಎಂ. ಬಿ.ಜಯರಾಮ್ ಅಧ್ಯಕ್ಷರು ವೈ.ಸಿ.ಸಿ.

LEAVE A REPLY

Please enter your comment!
Please enter your name here