ಪುತ್ತೂರಿನ ಜನತೆಗೆ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಕೊಡುಗೆ ; ಶೀಘ್ರವೇ ಪ್ರಪ್ರಥಮ ಅಲೈಡ್ ಹೆಲ್ತ್ ಸಯನ್ಸ್ ಕಾಲೇಜು ಆರಂಭ

0

ಪುತ್ತೂರು:ಜಿಲ್ಲೆಯ ಎರಡನೆಯ ಅತಿದೊಡ್ಡ ಪಟ್ಟಣ ಎಂದು ಪ್ರಸಿದ್ಧಿ ಪಡೆದಿರುವ ಪುತ್ತೂರಿನಲ್ಲಿ ಎನ್‌ಎಬಿಹೆಚ್ ಮಾನ್ಯತೆ ಪಡೆದ ಪುತ್ತೂರಿನ ಪ್ರಪ್ರಥಮ ಆಸ್ಪತ್ರೆ ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ‘ಪ್ರಗತಿಗಾಗಿ ಸೇವೆ-ಸೇವೆಗಾಗಿ ಪ್ರಗತಿ’ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ 19 ವರ್ಷಗಳಿಂದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆಯೊಂದಿಗೆ ಪ್ರಗತಿ ಪಾರಾ ಮೆಡಿಕಲ್ ಕಾಲೇಜನ್ನು ನಡೆಸುತ್ತಿದೆ.ಇದೀಗ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಅಲೈಡ್ ಹೆಲ್ತ್ ಸಯನ್ಸ್ ಕಾಲೇಜು ಆರಂಭಿಸುತ್ತಿದೆ.

ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪಕ ಅಧ್ಯಕ್ಷ, ಹಿರಿಯ ವೈದ್ಯಕೀಯ ತಜ್ಞರಾಗಿರುವ ಡಾ.ಶ್ರೀಪತಿ ರಾವ್ ಇವರು ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಅರೆ ವೈದ್ಯಕೀಯದಲ್ಲಿ ಇರುವಂತಹ ವಿಪುಲ ಅವಕಾಶಗಳನ್ನು ಮನಗಂಡು 2013ರಲ್ಲಿ ಪ್ರಪ್ರಥಮಬಾರಿಗೆ ಪಾರ ಮೆಡಿಕಲ್ ಕಾಲೇಜನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ ಅರೆ ವೈದ್ಯಕೀಯ ಪದವಿ ಶಿಕ್ಷಣವನ್ನು ಕೊಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅನುಮೋದನೆಯೊಂದಿಗೆ ಕನಾರ್ಟಕ ಸರಕಾರದ ಮಾನ್ಯತೆಯನ್ನು ಪಡೆದುಕೊಂಡು ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಅಲೈಡ್ ಹೆಲ್ತ್ ಸಯನ್ಸ್ ಕಾಲೇಜು ಬಿಎಸ್ಸಿ, ಎಮ್.ಎಲ್.ಟಿ ಮತ್ತು ಬಿಎಸ್ಸಿ ಒಟಿ ಹಾಗು ಎಟಿ ಎಂಬ ಕೋರ್ಸನ್ನು 2022-23ರಲ್ಲಿ ಆರಂಭಿಸುತ್ತಿದೆ. ದೂರದ ನಗರಗಳಿಗೆ ಹೋಗಿ ಓದಲು ಅಶಕ್ತರಾದ ವಿದ್ಯಾರ್ಥಿಗಳಿಗಾಗಿ ಶೀಘ್ರವೇ ‘ಪ್ರಗತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಯನ್ಸ್’ ಕಾಲೇಜು ಪುತ್ತೂರಿನಲ್ಲಿ ಪ್ರಾರಂಭವಾಗಲಿದೆ.‌ ಅಲೈಡ್ ಕೋರ್ಸ್‌ಗಳಿಗೆ ಪ್ರವೇಶ ಸಿಗಲು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕನಿಷ್ಟ ಶೇ.45 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಕೋರ್ಸ್ ಮಾಡಿದವರಿಗೆ ದೇಶ ವಿದೇಶಗಳಲ್ಲಿ ಅವಕಾಶ

ನೂತನ ಕೋರ್ಸ್ ಆರಂಭಗೊಂಡಿರುವುದು ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಒಂದು ಸುವರ್ಣ ಅವಕಾಶ ಎನ್ನಬಹುದು. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ, ಸರಕಾರದ ಆರೋಗ್ಯ ಇಲಾಖೆಯಲ್ಲಿ, ಖಾಸಗಿ ಆಸ್ಪತ್ರೆಯಲ್ಲಿ, ಡಯಾಗ್ನೊಸ್ಟಿಕ್ ಸೆಂಟರ್‌ಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಭಾರತೀಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಕೌಶಲ್ಯ ಹಾಗೂ ಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡುವುದರ ಜೊತೆಗೆ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಇತರ ಕಡೆಗಳಿಗಿಂತ ಹೆಚ್ಚಿನ ಅವಕಾಶಗಳಿವೆ.

ಪ್ರಗತಿ ಆಸ್ಪತ್ರೆಯ ಸೌಲಭ್ಯ

ಪ್ರತಿಷ್ಠಿತ ಕೆಎಂಸಿ ಸಹಯೋಗದಲ್ಲಿ ದಿನದ 24ಗಂಟೆ (24*7) ಕಾರ್ಯ ನಿರ್ವಹಿಸುತ್ತಿರುವ ತುರ್ತು ಚಿಕಿತ್ಸಾ ಘಟಕ, 32 ಸಲೈಸ್ ಸಿಟಿ ಸ್ಕ್ಯಾನ್ ವ್ಯವಸ್ಥೆ, 100 ಹಾಸಿಗೆಗಳ ವ್ಯವಸ್ಥೆ, ನುರಿತ ವೈದ್ಯರು ಹಾಗೂ ಸಿಬ್ಬಂದಿ, ಎಲ್ಲ ರೀತಿಯ ಸರಕಾರಿ ಹಾಗೂ ಖಾಸಗಿ ಆರೋಗ್ಯ ವಿಮಾ ಯೋಜನೆಗಳಿವೆ.

LEAVE A REPLY

Please enter your comment!
Please enter your name here