ಪುತ್ತೂರು : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇವರು ಕೊಡಮಾಡುವ ರಾಜ್ಯಮಟ್ಟದ ಉತ್ತಮ ಸಿಆರ್ಪಿಗಳಿಗೆ ನೀಡುವ ಶಿಕ್ಷಣ ಸಾರಥಿ ಪ್ರಶಸ್ತಿಗೆ ಕುಂಬ್ರ ಕ್ಲಸ್ಟರ್ನ ಸಿಆರ್ಪಿ ಶಶಿಕಲಾ ಬಿ.ರವರು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಜು.24ರಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀಉದ್ದಾನೇಶ್ವರ ಸಮುದಾಯ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಇವರು ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಹಲವು ತರಬೇತಿ ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ. ಮಕ್ಕಳಿಗೆ ಪರಿಹಾರ ಬೋಧನೆಯಲ್ಲಿ ಉತ್ತಮ ಶಿಕ್ಷಕಿಯಾಗಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಬೊಳುವಾರು ಬೊಳುವಾರು ದಿ.ಶೇಷಪ್ಪ ಮತ್ತು ಪುಷ್ಪಾವತಿ ದಂಪತಿ ಪುತ್ರಿಯಾದ ಇವರು ಪತಿ ಮೈಸೂರಿನ ಬಿಇಎಂಎಲ್ ಕಂಪೆನಿ ನಿವೃತ್ತ ಉದ್ಯೋಗಿ ಮೋಹನ್ ಪಿ., ಪುತ್ರಿಯರಾದ ವಿಜಯಾ ಬ್ಯಾಂಕ್ ಉದ್ಯೋಗಿ ಆಶಿತಾ ವಿಕ್ರಮ್ ಮತ್ತು ಕುಮಾರಿ ಶಿವಾನಿಯವರೊಂದಿಗೆ ಕಲ್ಲಾರೆಯಲ್ಲಿ ವಾಸವಾಗಿದ್ದಾರೆ.