ಪೆರ್ಲಂಪಾಡಿ: ಕೊಳ್ತಿಗೆ ಯುವಕ ಮಂಡಲಕ್ಕೆ ಆಯ್ಕೆ

0
  • ಅಧ್ಯಕ್ಷ: ಭರತ್‌ರಾಜ್, ಪ್ರ.ಕಾರ್ಯದರ್ಶಿ: ವಿಜೇಶ್ ರೈ, ಕೋಶಾಧಿಕಾರಿ: ಜನಾರ್ದನ್

ಪುತ್ತೂರು: ಕೊಳ್ತಿಗೆ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಜು.17 ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಭರತ್‌ರಾಜ್ ಕುದ್ಕುಳಿ, ಪ್ರ.ಕಾರ್ಯದರ್ಶಿಯಾಗಿ ವಿಜೇಶ್ ರೈ ಕೆಳಗಿನಮನೆ, ಕೋಶಾಧಿಕಾರಿಯಾಗಿ ಜನಾರ್ದನ ಪುತ್ರೋಡಿಮೂಲೆ, ಉಪಾಧ್ಯಕ್ಷರಾಗಿ ನಿತಿನ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ನಾಗೇಶ್ ಬೀರ್ಣಕಜೆ, ಕ್ರೀಡಾಕಾರ್ಯದರ್ಶಿಗಳಾಗಿ ಸನತ್ ಕುಮಾರ್ ಚಾಲೆಪಡ್ಪು, ಕಿಶೋರ್ ಕುಮಾರ್ ಬೀಜದಕುಮೇರು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪವನ್ ಡಿ.ಜಿ, ಶೈಲೇಶ್ ಪಟ್ಲ, ಸಂಘಟನಾ ಕಾರ್ಯದರ್ಶಿಗಳಾಗಿ ಹರ್ಷಿತ್ ಕುದ್ಕುಳಿ ಮತ್ತು ಪ್ರವೀಣ್ ಪಿರವರುಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಪ್ರಮೋದ್ ಕೆ.ಎಸ್, ವೆಂಕಟ್ರಮಣ ಆಚಾರ್ ಪಿ, ಅಶೋಕ್ ಒರ್ಕೊಂಬು, ಪ್ರವೀಣ ಜಿ.ಕೆ ಗೋಳಿತ್ತಡಿ, ಶಿವರಾಮ ಪೂಜಾರಿರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವ ಅಧ್ಯಕ್ಷ ನಿತಿನ್ ಕುಮಾರ್ ಗುಂಡಿಮಜಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ್ ಡಿ.ಜಿ ಕಾರ್ಯಕ್ರಮ ನಿರೂಪಿಸಿ, ಜನಾರ್ದನ್ ಪಿ.ಪುತ್ರೋಡಿಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here