ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

0

ಅಧ್ಯಕ್ಷ: ಎ.ಕೆ ಜಯರಾಮ ರೈ, ಪ್ರ.ಕಾರ್ಯದರ್ಶಿ: ರಾಮಕೃಷ್ಣ ಭಟ್, ಕೋಶಾಧಿಕಾರಿ: ರಮೇಶ್ ರೈ ಬೋಳೋಡಿ, ಉಪಾಧ್ಯಕ್ಷರುಗಳು: ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಬೈಲಾಡಿ ಉಮಾಕಾಂತ ಮಾಡಾವು, ಜತೆ ಕಾರ್ಯದರ್ಶಿ: ಸುಬ್ರಾಯ ಗೌಡ

ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ: ಶಶಿಧರ ರಾವ್ ಬೊಳಿಕ್ಕಲ

ಪುತ್ತೂರು: ಇತಿಹಾಸ ಪ್ರಸಿದ್ಧ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನಾ ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರ ಅಧ್ಯಕ್ಷತೆಯಲ್ಲಿ ಜು.19 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಶಿಧರ ರಾವ್ ಬೊಳಿಕ್ಕಲರವರು, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನವು ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ.ಇಲ್ಲಿ ನೆಲೆಯಾಗಿರುವ ದೇವಿಯು ಬಹಳ ಕಾರಣಿಕತೆಯನ್ನು ಹೊಂದಿದ್ದು ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ತಾಯಿಯಾಗಿ ನೆಲೆಯಾಗಿದ್ದಾಳೆ. ಇದೀಗ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಬಗ್ಗೆ ಚಿಂತನೆ ಮಾಡಿದ್ದು ಶಿಲ್ಪಿಯವರನ್ನು ಕರೆದುಕೊಂಡು ಅವರ ನಿರ್ದೇಶನದಂತೆ ಜೀರ್ಣೋದ್ಧಾರ ಕೆಲಸ ಆರಂಭಿಸಲಾಗುವುದು. ದೇವಸ್ಥಾನದ ಗರ್ಭಗುಡಿ ಸಹಿತ ಸುಮಾರು ೫ ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಪಡೆಯಲಿದೆ. ಜೀರ್ಣೋದ್ಧಾರ ಸಮಿತಿಯೊಂದಿಗೆ ವ್ಯವಸ್ಥಾಪನ ಸಮಿತಿಯು ಸಂಪೂರ್ಣ ತೊಡಗಿಸಿಕೊಳ್ಳಲಿದೆ ಅಲ್ಲದೆ ಊರಪರವೂರ ಭಕ್ತರ ಸಹಕಾರ ಅಗತ್ಯ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ರಚನೆ: ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್, ಕೋಶಾಽಕಾರಿಯಾಗಿ ರಮೇಶ್ ರೈ ಬೋಳೋಡಿ, ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಪೂಜಾರಿ ಕೆಂಗುಡೇಲು ಮತ್ತು ಬೈಲಾಡಿ ಉಮಾಕಾಂತ್ ಮಾಡಾವು ಮತ್ತು ಜತೆ ಕಾರ್ಯದರ್ಶಿಯಾಗಿ ಸುಬ್ರಾಯ ಗೌಡರವರುಗಳನ್ನು ಆಯ್ಕೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾಗಿ ಚಂದ್ರಶೇಖರ ರೈ ಇಳಂತಾಜೆ, ಎಸ್.ಬಿ.ಜಯರಾಮ ರೈ ಬಳಜ್ಜ, ಸಂತೋಷ್ ಕುಮಾರ್ ರೈ ಇಳಂತಾಜೆ, ನಾರಾಯಣ ಮೇಸಿ ಸಣಂಗಳ, ಮಾಧವ ಆಚಾರ್ಯ ದೇವಿನಗರ, ರಾಮಯ್ಯ ರೈ ತಿಂಗಳಾಡಿ, ದಿವಾಕರ ರೈ ಸಣಂಗಳ, ಸರ್ವೇಶ್ವರ ಭಟ್ ಕೈತಡ್ಕ, ಗಣೇಶ್ ಭಟ್ ಕೈತಡ್ಕ, ಹರ್ಷ ಕುಮಾರ್ ರೈ ಮಾಡಾವು, ಅಜಿತ್ ರೈ ಸೊರಕೆ, ರಮೇಶ್ ರೈ ಲಲಿತವನ ಅಬ್ಬೆಜಾಲು, ಮೋಹನ ಗೌಡ ಎರಕ್ಕಲ, ರಮಾನಾಥ ರೈ ಕೋಡಂಬು, ಜಯಂತ ಪೂಜಾರಿ ಕೆಂಗುಡೇಲು, ರವಿಂದ್ರ ಪೂಜಾರಿ ಕಣಿಯಾರು, ರಾಜೇಶ್ ಎಂ.ಎಸ್ ಮಾಡಾವು ಸಂಪಾಜೆ, ಹರೀಶ್ ನಾಯ್ಕ ಕಣಿಯಾರು, ಮಾಯಿಲ ಅಜಿಲಾಯ ಕಣಿಯಾರು, ಚಂದ್ರಹಾಸ ರೈ ಮಠ, ಮೋಹನ್ ರೈ ಬೇರಿಕೆ ಮಾಡಾವು, ಗೋವಿಂದ ಭಟ್ ಸಣಂಗಳ, ಹರಿಣಾಕ್ಷ ಗೌಡ ಸಣಂಗಳ, ಬಾಲಕೃಷ್ಣ ರೈ ನೆಟ್ಟಾಳ, ಶೇಷಪ್ಪ ದೇರ್ಲ, ಬಟ್ಯಪ್ಪ ರೈ ದೇರ್ಲ, ಶ್ರೀಧರ ರೈ ಕೋಡಂಬು, ನಾರಾಯಣ ಪಾಟಾಳಿ ದೇರ್ಲ, ರವಿಕುಮಾರ್ ಕೈತಡ್ಕ, ಕೃಷ್ಣಪ್ರಸಾದ್ ರೈ ಕಣಿಯಾರುರವರುಗಳನ್ನು ಆಯ್ಕೆ ಮಾಡಲಾಯಿತು.

ಭಕ್ತಾದಿಗಳ ಸಹಕಾರ ಪಡೆದುಕೊಂಡು ಜೀರ್ಣೋದ್ಧಾರ ಕೆಲಸ: ಎ.ಕೆ ಜಯರಾಮ ರೈ: ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ಊರಪರವೂರ ಭಕ್ತರ ಸಹಕಾರ ಪಡೆದುಕೊಂಡು ಮಾಡುವುದು. ಮುಂದಿನ 50 ವರ್ಷಗಳ ಕಾಲ ದೇವಸ್ಥಾನಕ್ಕೆ ಯಾವುದೇ ತೊಂದರೆ ಬರದ ರೀತಿಯಲ್ಲಿ ನೀಲ ನಕ್ಷೆ ತಯಾರಿಸಿ ಅದರಂತೆ ಜೀರ್ಣೋದ್ಧಾರ ಮಾಡಲಾಗುವುದು. ಎಲ್ಲಾ ವೆಚ್ಚಗಳು ಸೇರಿ ಅಂದಾಜು 5 ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವುದು ಎಂದು ತಿಳಿಸಿ ಎಲ್ಲಾ ಭಕ್ತಾದಿಗಳ ಸಹಕಾರ ಕೋರಿದರು.

ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ರಾಮಣ್ಣ ಗೌಡ, ಪದ್ಮನಾಭ ಪಿ, ಚರಣ್ ಕುಮಾರ್, ಈಶ್ವರಿ ಜೆ.ರೈ ಉಪಸ್ಥಿತರಿದ್ದರು. ದೇವಸ್ಥಾನದ ಕಛೇರಿ ವ್ಯವಸ್ಥಾಪಕ ಚಂದ್ರಶೇಖರ ರೈ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಸದಸ್ಯ ಬಾಬು ಪಾಟಾಳಿ ದೇರ್ಲ ವಂದಿಸಿದರು.

ಅಂದಾಜು 5 ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ

ದೇವಸ್ಥಾನದ ಗರ್ಭಗುಡಿ ಸೇರಿದಂತೆ ಗಣಪತಿ ಗುಡಿ, ಶಾಸ್ತಾರ ಗುಡಿ, ಗೋಪಾಲಕೃಷ್ಣನ ಗುಡಿ ಹಾಗೂ ನಮಸ್ಕಾರ ಮಂಟಪ ಸೇರಿದಂತೆ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವುದು ಹಾಗೂ ಬ್ರಹ್ಮಕಲಶೋತ್ಸವ ಮಾಡುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಜೀರ್ಣೋದ್ಧಾರಕ್ಕೆ ಊರಪರವೂರ ಭಕ್ತಾಽಗಳ ಸಹಕಾರವನ್ನು ಯಾಚಿಸಲಾಯಿತು.

LEAVE A REPLY

Please enter your comment!
Please enter your name here