ಮಜ್ಜಾರಡ್ಕ ವಿಷ್ಣು ಯುವಶಕ್ತಿ ಬಳಗದಿಂದ ಕಾಲಿನ ಶಸ್ತ್ರಚಿಕಿತ್ಸೆಗೆ ಬಾಲಕಿಗೆ ರೂ.50 ಸಾವಿರ ಆರ್ಥಿಕ ನೆರವು

0

ಪುತ್ತೂರು: ಇತ್ತೀಚೆಗೆ ಉಪ್ಪಳದ ಬಾಯಾರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ ಪುಟಾಣಿ ವಿಷ್ಣು ಪ್ರಿಯಾರವರ ವೈದ್ಯಕೀಯ ವೆಚ್ಚಕ್ಕೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣುಯುವಶಕ್ತಿ ಬಳಗದಿಂದ ಆರ್ಥಿಕ ನೆರವು ನೀಡಲಾಯಿತು.

ಕೆದಂಬಾಡಿ ಬೀಡು ನಿವಾಸಿ ಜಯಪ್ರಕಾಶ್ ಬಲ್ಲಾಳ್ ಮತ್ತು ಉಷಾ ಕುಮಾರಿರವರ ಪುತ್ರಿ ವಿಷ್ಣು ಪ್ರಿಯಾರವರು ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಇದೀಗ ಕೃತಕ ಕಾಲು ಜೋಡಣೆಗೆ ಲಕ್ಷಾಂತರ ರೂಪಾಯಿ ಖರ್ಚು ಇದ್ದು ಇವರ ನೋವಿಗೆ ಸ್ಪಂದಿಸಿ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಸಂಘಟನೆಯ ಸದಸ್ಯರು ಹಾಗೂ ದಾನಿಗಳ ಸಹಾಯದಿಂದ ರೂ.50 ಸಾವಿರವನ್ನು ಸಂಘಟನೆ ಸಹಾಯ ನಿಧಿ ಚೆಕ್ ಮುಖಂತರ ಮಗುವಿನ ಹೆತ್ತವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಯುವಶಕ್ತಿ ಬಳಗದ ಗೌರವ ಸಲಹೆಗಾರರಾದ ಲೋಕೇಶ್ ರೈ ಅಮೈ, ಉದ್ಯಮಿ ಮೋಹನ್ ದಾಸ್ ರೈ ಕುಂಬ್ರ, ಸಂಘಟನೆ ಅಧ್ಯಕ್ಷ ಉದಯ್ ಸ್ವಾಮಿನಗರ, ಪ್ರ.ಕಾರ್ಯದರ್ಶಿ ಭವಿತ್ ಮಜ್ಜಾರ್, ಜೊತೆ ಕಾರ್ಯದರ್ಶಿ ರವಿ ಸ್ವಾಮಿನಗರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಪ್ರತೀಕ್ ಗೋಲ್ತಿಲ, ಸದಸ್ಯರುಗಳಾದ ಕೇಶವ ಸ್ವಾಮಿನಗರ, ಸಾಂತಪ್ಪ ಪೂಜಾರಿ ಓಲ್ತಾಜೆ, ಪ್ರಸಾದ್ ಕೆರೆಮಾರ್ -ಕಾವು, ಸಮಿತ್ ಮಜ್ಜಾರ್, ಹರೀಶ್ ಸ್ವಾಮಿನಗರ, ಲೋಕೇಶ್ ಸ್ವಾಮಿನಗರ, ಸತೀಶ್ ಮಜ್ಜಾರ್, ಚೇತನ್ ಮಜ್ಜಾರ್, ಚಂದ್ರಿಕಾ ಸ್ವಾಮಿನಗರ, ಹರಿಣಾಕ್ಷಿ ಸ್ವಾಮಿನಗರ ಉಪಸ್ಥಿತರಿದ್ದರು. ಈ ನೆರವು ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ, ಮಯೂರ ಸಹಕರಿಸಿದ ದಾನಿಗಳಿಗೆ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here