ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಸಮಸ್ಯೆ ನಿವಾರಣೆ ; ಪುತ್ತೂರಿನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ತೇಜಸ್ವಿ ಮಂಜ್ರೇಕರ್ ಹೇಳಿಕೆ

0

ಪುತ್ತೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಪದಾಽಕಾರಿಯಾಗಿರುವ ತೇಜಸ್ವಿ ಮಂಜ್ರೇಕರ್‌ರವರು ಇತರ ಪದಾಧಿಕಾರಿಗಳೊಂದಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಪುತ್ತೂರು ಯುವ ಕಾಂಗ್ರೆಸ್ ಪದಾಽಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದರು.‌

ಬಳಿಕ ತೇಜಸ್ವಿ ಮಂಜ್ರೇಕರ್ ಮಾತನಾಡಿ ಉದ್ಯೋಗ ಕೊಡುತ್ತೇನೆ ಎಂದು 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರದ ಭರವಸೆ ಹುಸಿಯಾಗಿದೆ. ಪ್ರಸ್ತುತ ದೇಶದ ಜನರಿಗೆ ಸರಿಯಾದ ಉದ್ಯೋಗವಿಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ. ಜನರ ಬದುಕು ದುಸ್ತರವಾಗಿದೆ. ಮುಂದಿನ ದಿನ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿದು ಜನರು ನಿಟ್ಟುಸಿರು ಬಿಡಲಿದ್ದಾರೆ ಎಂದು ಹೇಳಿದರು.

ಇಂದು ದೇಶದ ವಿವಿಧ ಕಡೆ ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಜನತೆ ಬಳಲುತ್ತಿದ್ದು, ಸರಕಾರದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ನೀಗಿಸಲು ಅಖಿಲ ಭಾರತ ಕಾಂಗ್ರೆಸ್ ನಾಯಕ ರಾಹುಲ್ ಗಾಂಽಯವರ ನೇತೃತ್ವದಲ್ಲಿ ನಿತ್ಯ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಮುಂದಿನ ವರ್ಷ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹಾಗೂ 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಮತ್ತು ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಯುವ ಕಾಂಗ್ರೆಸಿಗರ ಶಕ್ತಿ ಪ್ರದರ್ಶಿಸಲು ‘ಯೂತ್ ಜೋಡೋ ಬೂತ್ ಜೋಡೋ’ ಸಹಿತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಯುವ ಕಾಂಗ್ರೆಸ್ ಪದಾಽಕಾರಿಗಳನ್ನು ನೇಮಕಮಾಡಿ ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಯುವ ಕಾಂಗ್ರೆಸಿಗರು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್‌ರವರು ಯುವ ಕಾಂಗ್ರೆಸ್ ಸಮಿತಿ, ಎನ್‌ಎಸ್‌ಯುಐ, ಮಹಿಳಾ ಕಾಂಗ್ರೆಸ್ ಘಟಕ, ಸೇವಾದಳ ಹಾಗೂ ಕಾಂಗ್ರೆಸಿನ ಎಲ್ಲಾ ಮುಂಚೂಣಿ ಘಟಕದ ಸಹಕಾರದಿಂದ ಕರ್ನಾಟಕದಲ್ಲಿ ಉತ್ತಮ ಕೆಲಸ ಮಾಡಿ ಜನ ಸ್ಪಂದನೆ ಕೆಲಸ ಮಾಡುತ್ತಾ ಜನಪ್ರಿಯರಾಗಿದ್ದಾರೆ. ಈ ಎಲ್ಲಾ ಕೆಲಸ ಕಾರ್ಯಗಳಿಂದಾಗಿ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿಗೆ ಜಯವಾಗಲಿದೆ ಎಂದು ಅವರು ಹೇಳಿದರು.

ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ಯುವ ಕಾಂಗ್ರೆಸಿಗರ ಗುರಿ- ಲುಕ್ಮಾನ್ : ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್‌ರವರು ಮಾತನಾಡಿ ಕರ್ನಾಟಕದಲ್ಲಿ ಚುನಾವಣಾ ವರ್ಷವಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಸಲುವಾಗಿ ಮತ್ತು ಯುವ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲು ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿಯು ಐದು ಮಂದಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಇವರು ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ನಮ್ಮ ಝೋನ್‌ಗೆ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪದಾಧಿಕಾರಿಯಾದ ತೇಜಸ್ವಿ ಮಂಜ್ರೇಕರ್‌ರವರನ್ನು ನೇಮಿಸಿದ್ದು, ಅವರು ಈಗಾಗಲೇ ಯುವ ಕಾಂಗ್ರೆಸ್‌ನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಽಕಾರಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ‘ಯೂತ್ ಜೋಡೋ ಬೂತ್ ಜೋಡೋ’ ಸಹಿತ ಹಲವಾರು ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದು ದೇಶದ ಪ್ರತಿಯೊಂದು ಬೂತ್‌ನಲ್ಲಿ ಹತ್ತರಿಂದ ಇಪ್ಪತ್ತು ಮಂದಿ ಯುವ ಕಾಂಗ್ರೆಸಿಗರ ಗ್ರಾಮ ಸಮಿತಿಯನ್ನು ನೇಮಿಸಿ ಅವರಿಗೆ ಗುರುತು ಪತ್ರ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಎರಡು ತಿಂಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದ ಅವರು, ಯಾರೇ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ನೀಡಿದರೂ ನಮಗೆ ವ್ಯಕ್ತಿ ಮುಖ್ಯವಾಗಿರದೆ ಪಕ್ಷ ಮುಖ್ಯವಾಗಿದ್ದು ನಾವು ಪ್ರತಿಯೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿರಬೇಕು ಎಂದರು.

ರಾಜ್ಯದಲ್ಲಿಯೇ ಪುತ್ತೂರು ಯುವ ಕಾಂಗ್ರೆಸ್ ಸಮಿತಿಗೆ ಮೆಚ್ಚುಗೆ -ಶ್ರೀಪ್ರಸಾದ್ : ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆಯವರು ಮಾತನಾಡಿ ಪುತ್ತೂರು ಯುವ ಕಾಂಗ್ರೆಸ್ ಸಮಿತಿಯು ಹಲವಾರು ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಉತ್ತಮ ಸಂಘಟನೆ ಎಂದು ಹೆಸರು ಗಳಿಸಿದೆ. ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪ್ಪಾಡುರವರೂ ಪುತ್ತೂರು ಯುವ ಕಾಂಗ್ರೆಸ್ ಸಂಘಟನೆಯು ರಾಜ್ಯಕ್ಕೆ ಮಾದರಿ ಸಂಘಟನೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಎಂದರು.

ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಪಕ್ ರಾಜಾಹುಲಿಯವರು ಮಾತನಾಡಿ ಯುವ ಕಾಂಗ್ರೆಸಿಗರು ಯಾವ ರೀತಿ ಸಂಘಟಿತರಾಗಬೇಕು ಎಂಬ ಬಗ್ಗೆ ವಿವರಿಸಿದರು. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಲಕೇರ್ ರವರು ಮಾತನಾಡಿ ಪಕ್ಷ ಸಂಘಟನೆ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು. ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಯುವ ಕಾಂಗ್ರೆಸ್‌ನ ಪದಾಽಕಾರಿಗಳಾದ ರೋಬಿನ್‌ತಾವೋ, ರಿಯಾಝ್ ಒಳತ್ತಡ್ಕ, ಅಭಿಷೇಕ್,ರಮಾನಂದ ಪೂಜಾರಿ, ರಂಜಿತ್ ಬಂಗೇರ, ರಾಜ್ಯ ಎನ್‌ಎಸ್‌ಯೂಐ ಪದಾಽಕಾರಿ -ರೂಕ್ ಬಾಯಾಬೆ, ಗಂಗಾಧರ್ ಶೆಟ್ಟಿ ಎಲಿಕ, ಶೆರೀ- ಬಲ್ನಾಡು, ಇಸ್ಮಾಯಿಲ್ ಬಲ್ನಾಡು, ಅಬ್ದುಲ್ ಸಮದ್, ಮಹಮ್ಮದ್ ಜುನೈದ್ ಸಾಲ್ಮರ, ಅಬ್ದುಲ್ ಜಲೀಲ್, ಸಂಶುದ್ದೀನ್ ಅಜ್ಜಿನಡ್ಕ, ಶಾನ್‌ವಾಝ್ ಬಪ್ಪಳಿಗೆ, ರೇಖಾ ಬಿ ಶೆಟ್ಟಿ ಪುರುಷರಕಟ್ಟೆ, ಆತಿಲ್ ಸಾಮೆತ್ತಡ್ಕ, ಮೂಸೆಕುಂಞಿ ಕಬಕ, ರವಿರಾಜ ಆಚಾರ್ಯ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ಭಂಡಾರ್‌ರ್ಕರ್, ಕಮಲೇಶ್ ಸರ್ವೆದೋಳ, ಸನದ್ ಯೂಸು-, ನೇಮಾಕ್ಷ ಸುವರ್ಣ, ಪ್ರಜ್ವಲ್ ರೈ, ಜಯಂತ, ಶಿಹಾಬ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here