ಗ್ರಾಮ ಪಂಚಾಯತಿಗೊಂದು ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘ

0

ದೇಶದ ಸಂಪತ್ತಾದ ಯುವಜನರು ಬಹಳಷ್ಟು ಅವಕಾಶವನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಬರುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಹಿಡಿದು ಮಹಾನಗರ ಪಾಲಿಕೆಯವರೆಗೆ ಯುವ ಜನರು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡರು ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ಪಡೆದ ಶಿಕ್ಷಣಕ್ಕೆ ಸರಿಯಾದ ಉದ್ಯೋಗ ಸಿಗದೇ ಇರುವುದು ಮತ್ತು ಸಿಗಬಹುದಾದ ಉದ್ಯೋಗ ಕ್ಕೆ ಕೌಶಲ್ಯಗಳ ಕೊರತೆಯಿಂದ ಅರ್ಹತೆಯನ್ನು ಪಡೆದು ಕೊಳ್ಳದೇ ಇರುವುದು ಯುವಜನರು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಯುವಕರ ಸಬಲೀಕರಣ ಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಇದರ ಸಹಯೋಗದೊಂದಿಗೆ ಪ್ರತಿ ಗ್ರಾಮ ಪಂಚಾಯತಿಗೊಂದು ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘ ಎಂಬ ನೂತನ ಯೋಜನೆ ಜಾರಿಗೊಳಿಸಿದೆ. ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ ಯುವಜನರನ್ನು ಸಂಘಟಿಸಿ ಅವರನ್ನು ಸಬಲೀಕರಿಸಲು, ಸ್ವ ಉದ್ಯೋಗ ಹಾಗೂ ಅರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ತರ ಯೋಜನೆ ಇದಾಗಿದೆ. ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘದಲ್ಲಿ ಕನಿಷ್ಠ ಹತ್ತು ಗರಿಷ್ಠ ಹತ್ತೊಂಬತ್ತು ಸದಸ್ಯರು ಇರಬೇಕಾಗಿದ್ದು 18 ರಿಂದ 27 ವರ್ಷದೊಳಗಿನ ಯುವಕರಿಗೆ ಸಂಘದ ಸದಸ್ಯರಾಗಬಹುದು. ಗ್ರಾಮೀಣ ಭಾಗದಲ್ಲಿನ ಯುವಕರಲ್ಲಿ ಅರ್ಥಿಕವಾಗಿ ಪ್ರಬಲರಾಗಲು, ಕೌಶಲ್ಯಗಳನ್ನು ವೃದ್ಧಿಸಲು, ಉದ್ಯೋಗ, ಸ್ವ ಉದ್ಯೋಗ ಆರಂಭಿಸಲು ಸ್ವ ಸಹಾಯ ಸಂಘದಿಂದ ಪ್ರಯೋಜನ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತೀ ತಾಲ್ಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರವನ್ನು ತರೆದು ಸ್ವ ಸಹಾಯ ಸಂಘವನ್ನು ಮುನ್ನಡೆಸಲಿದೆ. ಈ ಕೇಂದ್ರದ ಮುಖಾಂತರ ಯುವ ಜನರು ಏನೇ ಸಮಸ್ಯೆ ಗೊಂದಲು ಇದ್ದಲ್ಲಿ ಯುವ ಸ್ಪಂದನ ಕೇಂದ್ರದ ಮುಖಾಂತರ ಮಾರ್ಗದರ್ಶನ ಪಡೆದುಕೊಳ್ಳಬಹುದು. ಯುವ ಜನರ ಸರ್ವತೋಮುಖ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದ ಸ್ವ ಸಹಾಯ ಸಂಘ ಸಹಕಾರಿಯಾಗಲಿದೆ. ಅದ್ದರಿಂದ ಗ್ರಾಮೀಣ ಭಾಗದ ಯುವ ಜನರು ತಮ್ಮ ಗ್ರಾಮ ಪಂಚಾಯತಿಗೆ ತೆರಲಿ ಸಂಘ ಸದಸ್ಯರಾಗಬಹುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನ ಗೊಂಡಿದ್ದು ಯುವಕರ ಸಬಲೀಕರಣಕ್ಕೆ ಉತ್ತಮ ವೇದಿಕೆಯಾಗಿದೆ.

ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘ ರಚಿಸುವ ನಿಟ್ಟಿನಲ್ಲಿ ಈಗಾಗಲೇ ಪುತ್ತೂರು ತಾಲ್ಲೂಕು ನಲ್ಲಿ ಯುವ ಸ್ಪಂದನ ಕಛೇರಿ ತರೆದಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಯಲ್ಲಿ ಯುವಕರ ಸ್ವ ಸಹಾಯ ಸಂಘ ರಚಿಸಿ ಅರ್ಥಿಕ ಚಟುವಟಿಕೆ, ಉದ್ಯೋಗಾಧರಿತ ತರಬೇತಿಯನ್ನು ನೀಡಲಾಗುವುದು.

ಶ್ರೀಕಾಂತ್ ಪೂಜಾರಿ ಬಿರಾವು
ಮೇಲ್ವಿಚಾರಕರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು

LEAVE A REPLY

Please enter your comment!
Please enter your name here