ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಸುದಾನ ಶಾಲೆ ರಾಜ್ಯ ಮಟ್ಟಕ್ಕೆ

0

ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಜು.15 ರಂದು ಪುತ್ತೂರಿನ ಬಾಲವನ ಈಜು ಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಪದಕಗಳನ್ನು ಜಯಿಸಿದ್ದು, 7 ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಹಾಗೂ 17ರ ವಯೋಮಿತಿ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

17 ರ ವಯೋಮಿತಿಯ ಬಾಲಕರವಿಭಾಗದಲ್ಲಿ ಹತ್ತನೇ ತರಗತಿಯ ನಂದನ್ ನಾಯ್ಕ್‌ರವರು, 200ಮೀ ಬ್ರೆಸ್ಟ್ ಸ್ಟ್ರೋಕ್(ಪ್ರ), 50ಮೀ ಬ್ರೆಸ್ಟ್ ಸ್ಟ್ರೋಕ್(ಪ್ರ), 100ಮೀ ಬ್ರೆಸ್ಟ್ ಸ್ಟ್ರೋಕ್(ದ್ವಿ), 4*100ಮೀ ಐ.ಎಂ ರಿಲೇ(ಪ್ರ), 4*100ಮೀ ಪ್ರೀ ಸ್ಟೈಲ್ ರಿಲೇ(ಪ್ರ), ಹತ್ತನೇ ತರಗತಿಯ ಅನಿಕೇತ್ ಎನ್‌ರವರು, 200ಮೀ ಐ.ಎಂ(ಪ್ರ), 50ಮೀ ಬ್ಯಾಕ್ ಸ್ಟ್ರೋಕ್(ದ್ವಿ), 100ಮೀ ಬ್ಯಾಕ್ ಸ್ಟ್ರೋಕ್(ತೃ), 4*100ಮೀ ಐ.ಎಂ ರಿಲೇ( ಪ್ರ), 4*100ಮೀ ಪ್ರೀ ಸ್ಟೈಲ್ ರಿಲೇ(ಪ್ರ), ಹತ್ತನೇ ತರಗತಿಯ ಹಾರ್ದಿಕ್ ಎಸ್ ನಾಯ್ಕ್‌ರವರು 4*100ಮೀ ಐ.ಎಂ ರಿಲೇ(ಪ್ರ), 4*100ಮೀ ಪ್ರೀ ಸ್ಟೈಲ್ ರಿಲೇ(ಪ್ರ), ಹತ್ತನೇ ತರಗತಿಯ ಚರಣ್ ಎ.ರವರು 4*100ಮೀ ಐ.ಎಂ ರಿಲೇ(ಪ್ರ), 4*100ಮೀ ಪ್ರೀ ಸ್ಟೈಲ್ ರಿಲೇ(ಪ್ರ), 14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ನಿಕೋಲಸ್ ರೊನಿನ್ ಮಥಾಯಸ್‌ರವರು 5೦ಮೀ ಬ್ರೆಸ್ಟ್ ಸ್ಟ್ರೋಕ್(ಪ್ರ), 100ಮೀ ಬ್ರೆಸ್ಟ್ ಸ್ಟ್ರೋಕ್(ಪ್ರ), 100ಮೀ ಪ್ರೀ ಸ್ಟೈಲ್(ಪ್ರ), ಹಾಗೂ 14ರ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಅನಿಕಾ ಯುರವರು 200ಮೀ ಪ್ರೀ ಸ್ಟೈಲ್(ಪ್ರ), 50ಮೀ ಬ್ರೆಸ್ಟ್ ಸ್ಟ್ರೋಕ್(ದ್ವಿ), 100ಮೀ ಪ್ರೀ ಸ್ಟೈಲ್(ದ್ವಿ), 4*100ಮೀ ಪ್ರೀ ಸ್ಟೈಲ್ ರಿಲೇ( ದ್ವಿ), ಆರನೇ ತರಗತಿಯ ಮಾನ್ವಿ ಡಿರವರು 200ಮೀ ಬ್ರೆಸ್ಟ್ ಸ್ಟ್ರೋಕ್(ದ್ವಿ), 4*100ಮೀ ಪ್ರೀ ಸ್ಟೈಲ್ ರಿಲೇ(ದ್ವಿ), ಆರನೇ ತರಗತಿಯ ಸಾನ್ವಿತಾ ಎಸ್‌ರವರು 4*100ಮೀ ಪ್ರೀ ಸ್ಟೈಲ್ ರಿಲೇ(ದ್ವಿ), ಆರನೇ ತರಗತಿಯ ಮೊನಿಕಾರವರು 200ಮೀ ಬ್ರೆಸ್ಟ್ ಸ್ಟ್ರೋಕ್(ತೃ), 4*100ಮೀ ಪ್ರೀ ಸ್ಟೈಲ್ ರಿಲೇ(ದ್ವಿ) ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ವಿಜೇತರಿಗೆ ಪುತ್ತೂರಿನ ಬಾಲವನ ಈಜು ಕೊಳದ ತರಬೇತುದಾರರಾದ ಪಾರ್ಥ ವಾರಾಣಸಿ ಹಾಗೂ ತಂಡ ತರಬೇತಿ ನೀಡಿರುತ್ತಾರೆ. ವಿಜೇತರನ್ನು ಸುದಾನ ಶಾಲೆಯ ಆಡಳಿತ ಮಂಡಳಿ, ಶಾಲಾ ಮುಖ್ಯ ಶಿಕ್ಷಕಿ ಶೋಭ ನಾಗರಾಜ್ ಹಾಗೂ ದೈಹಿಕ ಶಿಕ್ಷಕರುಗಳಾದ ಪುಷ್ಪರಾಜ್, ನವೀನ್,  ಲೀಲಾವತಿ, ಜೀವಿತಾರವರು ಅಭಿನಂದಿಸಿರುತ್ತಾರೆ.

7 ಮಂದಿ ರಾಜ್ಯ ಮಟ್ಟಕ್ಕೆ..
ವಿದ್ಯಾರ್ಥಿಗಳಾದ ನಂದನ್ ನಾಯ್ಕ್, ಅನಿಕೇತ್ ಎನ್, ಹಾರ್ದಿಕ್ ಎಸ್.ನಾಯ್ಕ್, ಚರಣ್ ಎಂ, ನಿಕೋಲಸ್ ರೊನಿನ್ ಮಥಾಯಸ್, ಅನಿಕಾ ಯು, ಮಾನ್ವಿ ಡಿ.ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ನಿಕೋಳಸ್ ರೊನಿನ್ ಮಥಾಯಸ್‌ರವರು 14ರ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here