ಬಡಗನ್ನೂರು: ಪ್ರಗತಿ ಬಂಧು – ಸ್ವಸಹಾಯ ಸಂಘಗಳ ಬಿ ಒಕ್ಕೂಟದ ಪದಗ್ರಹಣ ಸಮಾರಂಭ

0

ಬಡಗನ್ನೂರುಃ  ಬಡಗನ್ನೂರು ಪ್ರಗತಿ ಬಂಧು – ಸ್ವಸಹಾಯ ಸಂಘಗಳ ಬಿ ಒಕ್ಕೂಟದ ಪದಗ್ರಹಣ ಸಮಾರಂಭವು ಪರಪುಜ್ಯ ರಾಜರ್ಷಿ ಡಾ ಡಿ.ವಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಕೃಪಾಶೀರ್ವಾದಗಳೊಂದಿಗೆ ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಜು 19 ರಂದು ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ವಶಕ್ಕಿ ಮಹಿಳಾ ಭಜನಾ ಮಂಡಳಿ ಪಡುಮಲೆ ಇದರ ಸದಸ್ಯರಿಂದ ಬಜನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗಾಂಧೀಜಿ ರವರ ಗ್ರಾಮಾ ರಾಜ್ಯದ ಕನಸು ನನಸು ಮಾಡುವ ಕಾರ್ಯ ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ ಮೂಲಕ ಪೂಜ್ಯ ಕಾವೊಂದರು ಮಾಡುತ್ತಿದ್ದಾರೆ.ಯೋಜನೆಯು ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಜನರು ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ . ಮಧ್ಯೆ ವರ್ಜನ ಶಿಭಿರದ ಮೂಲಕ ದಾರಿ ತಪ್ಪಿದವರನ್ನು ಸಮಾಜದ ಮುಖ್ಯವಾಹಿನಿ. ತಂದು ಅವರ ಜೀವನ ಸುಭದ್ರಗೊಳಿಸುವ ಕಾರ್ಯ ಗ್ರಾಮಾಭಿವೃದ್ದಿ ಯೋಜನೆಯಿಂದ ಆಗುತ್ತಿದೆ ಪೂಜ್ಯರ ಸಮಾಜ ಮುಖಿ ಕಳಕಳಿಯನ್ನು ಮನಗಂಡ ಭಾರತ ಸರ್ಕಾರ ಅವರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಇದ್ದಂತೆ. ಎಂದ ಅವರು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯ ಪೂರ್ಣ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯ ನೆಡೆಯುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ಯಾಚಿಸಿ ಕಾರ್ಯಕ್ರಮಕ್ಕೆ  ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಪುತ್ತೂರು ಬಿಸಿ ಟ್ರಸ್ಟ್ ನ ಯೋಜನಾಧಿಕಾರಿ ಅನಂದ ಕೆ, ಮಾತನಾಡಿ ಯೋಜನೆಯ ಕಾರ್ಯವೈಖರಿ 1982 ಆರಂಭಗೊಂಡು ಪುತ್ತೂರು ತಾಲೂಕಿಗೆ 2002 ಪದಾರ್ಪಣೆ ಗೊಂಡಿತು. ಗ್ರಾಮಾಭಿವೃದ್ದಿ ಯೋಜನೆ ಸೇವಾ ಕ್ಷೇತ್ರ ಯಾವುದೇ ಯೋಜನೆಯ ಕೆಲಸ ಕಾರ್ಯಗಳು ಸಮರ್ಪಕ ನಡೆಸುವ ಉದ್ದೇಶ.ಮನುಷ್ಯನ ಹುಟ್ಟಿನಿಂದ ಸಾವಿನ ವರೆಗಿನ ಕಾರ್ಯಕ್ರಮವನ್ನು ಪೂಜ್ಯಕಾವೊಂದರ ಯೋಚನೆಯನ್ನು ಯೋಜನೆಯ ಮೂಲಕ ಅನುಷ್ಠಾನಕ್ಕೆ ತಂದರು.
ಸಿ.ಎಸ್ ಸಿ ಕಾರ್ಯಕ್ರಮದಡಿ ಗ್ರಾಮ ಮಟ್ಟದಲ್ಲಿ ಸಿ.ಎಸ್.ಸಿ ಕೇಂದ್ರ ರಚಿಸುವುದು. ಹಾಗೂ ಪ್ರತಿ ಸದಸ್ಯರಿಗೂ ಸಿಸಿ ಖಾತೆ ರಚಿಸಿ ತಮ್ಮ ವ್ಯವಹಾರ ಹೆಚ್ಚಿಸುವುದು ಮತ್ತು  .ಡಿ.ಎಲ್.ಪಿ ಮೂಲಕ ಸ್ವ ಉದ್ಯೋಗ ಕ್ಕೆ ಅವಕಾಶ  ಕಲ್ಪಿಸುವ  ಪೂಜ್ಯ ಕಾವೊಂದರ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು. 
ಬಡಗನ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಆಳ್ವ ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮದ ಅಭಿವೃದ್ಧಿ ಬಗ್ಗೆ ವಿವಿಧ ಕಾರ್ಯವೈಖರಿ ಹಂಬಿಕೊಳ್ಳುತ್ತಿದೆ.  ಸಿರಿ ಯೋಜನೆಯಡಿ  ಸ್ವ ಉದ್ಯೋಗ ತರಬೇತಿ ನೀಡಿ ಮಹಿಳೆಯರು   ಸ್ವಾವಲಂಬಿ ಜೀವನಕ್ಕೆ ಅವಕಾಶ  ದೊರಕಿದೆ. ಭಾರತ ಸರ್ಕಾರ ಪೂಜ್ಯ ಕಾವೊಂರದರನ್ನು ರಾಜಾಸಭಾ ಸದಸ್ಯರಾಗಿ ಅಯ್ಕೆಯಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು.
ಅರಿಯಡ್ಕ ವಲಯ ವಲಯಾಧ್ಯಕ್ಷ ನವೀನ ಬಿ.ಡಿ,, ಅರಿಯಡ್ಕ ಜನಜಾಗೃತಿ ವಲಯಾಧ್ಯಕ ವಿಕ್ರಮ್ ರೈಸಾಂತ್ಯ, ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ನಿಕಟ ಪೂರ್ವ ಅಧ್ಯಕ್ಷೆ ಸವಿತಾ ಪದಡ್ಕ  ಸಂದಭೋಚಿತ  ಮಾತನಾಡಿ ಶುಭ ಹಾರೈಸಿದರು.
ಸಬೆಯು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕನ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬಡಗನ್ನೂರು ಗ್ರಾ.ಪಂ ಸದಸ್ಯರಾದ ರವಿರಾಜ ರೈ ಸಜಂಕಾಡಿ, ವೆಂಕಟೇಶ್ ಸುಳ್ಯಪದವು, ಕುಮಾರ ಅಂಬಟೆಮೂಲೆ, ಲಿಂಗಪ್ಪ ಗೌಡ ಮೋಡಿಕೆ, ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು, ಹಾಗೂ ಒಕ್ಕೂಟದ ನಿಕಟ ಪೂರ್ವ ಹಾಗೂ, ನೂತನ ಸಮಿತಿ ಪದಾಧಿಕಾರಿಗಳು, ಮತ್ತು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದರು.
ಸೇವಾ ಪ್ರತಿನಿಧಿ ಪುಷ್ಪಲತಾ ಪೈರುಪುಣಿ ಸ್ವಾಗತಿಸಿದರು ಒಕ್ಕೂಟದ. ಕೋಶಾಧಿಕಾರಿ ಭಾರತಿ ರೈ ಕುದ್ಕಾಡಿ ವಂದಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿ ಮೇಗಿನಮನೆ ಒಕ್ಕೂಟದ ವರದಿ ವಾಚಿಸಿದರು.ಅರಿಯಡ್ಕ ವಲಯ ಮೇಲ್ವಿಚಾರಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
 
ಕಾರ್ಯಕ್ರಮದ ಮಧ್ಯೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಪುತ್ತೂರು ತಾ.ಪಂ ತಾಲೂಕು ಸಂಯೋಜಕ ಭರತ್ ರಾಜ್ ಉದ್ಯೋಗ ಖಾತರಿ ಯೋಜನೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅದಿಕಾರಿ ಗ್ರಾ.ಪಂ ನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here