ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

0

  • ಕ್ರೀಡಾ ಮನೋಭಾವ ವ್ಯಕ್ತಿ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ- ಲೋಕೇಶ್ ಎಸ್.ಆರ್.

 

 

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಒಳಾಂಗಣ ಆಫೀಸರ್‍ಸ್ ಕ್ಲಬ್ ಪರ್ಲಡ್ಕದಲ್ಲಿ ನಡೆದ ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್. ಆರ್ ಅವರು ಕ್ರೀಡಾ ಮನೋಭಾವ ವ್ಯಕ್ತಿ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಸೋಲು-ಗೆಲುವುಗಳನ್ನು ಸಮಾನ ಮನಸ್ಕತೆಯಿಂದ ಸ್ವೀಕರಿಸುವ ಗುಣಕ್ರೀಡೆಯಲ್ಲಿ ಮನ್ನಡೆಯಲು ಸಹಕಾರಿಯಾಗಲಿದೆಎಂದರು.


ಪಂದ್ಯಾಟದ ಸಭಾಧ್ಯಕ್ಷತೆ ವಹಿಸಿ ಶಾಲಾ ಅಧ್ಯಕ್ಷ ರಮೇಶ್ಚಂದ್ರ ಇವರು ಕ್ರೀಡಾ ಕ್ಷೇತ್ರದಲ್ಲಿ ನಿರಂತರತೆ ಹಾಗೂ ದೃಢತೆ ಕಾಯ್ದುಕೊಳ್ಳಬೇಕಾದ ಅಗತ್ಯತೆಯನ್ನು ತಿಳಿಸಿದರು.ಮುಖ್ಯ ಅಭ್ಯಾಗತರಾಗಿ ಬಂಟ್ವಾಳ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಯುತ ಸುಧಾಕರ ಶೆಟ್ಟಿ ಬೀಡಿನಮಜಲು ತಮ್ಮ ಕ್ರೀಡಾಸಕ್ತಿಯನ್ನು ಉದಾಹರಣೆ ನೀಡುತ್ತಾ ತಾವಿಂದಿಗೂ ಆಟಕ್ಕೆ ಸಮಯ ನೀಡಿದುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳಿಂದ ದೂರವಾಗಿರಲು ಸಾಧ್ಯವಾಗಿರುವ ಬಗ್ಗೆ ತಿಳಿಸಿದರು.


ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಂದರ ಗೌಡ,ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ  ನವೀನ್ ವೇಗಸ್,ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷಅಬ್ರಹಾಂ,ಪ್ರಾಥಮಿಕ ಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ನವೀನ್ ರೈ ಹಾಗೂ ತಾಲೂಕು ಗ್ರೇಡ್ -೨ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಉಪಸ್ಥಿತರಿದ್ದರು.

ಭಾರತಮಾತೆಗೆ ಪುಷ್ಪಾರ್ಚನೆಯೊಂದಿಗೆ ಆರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮುಖ್ಯಗುರುಗಳಾದಆಶಾ ಬೆಳ್ಳಾರೆ ಪ್ರಾಸ್ತಾವಿಕ ಹಾಗೂ ಸ್ವಾಗತ ಮಾತುಗಳನ್ನಾಡಿದರು.ಶಾಲಾ ಸಹಶಿಕ್ಷಕರಾದ ಶ್ರೀಯುತ ಚಂದ್ರಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರೋಪದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಮೇಶ್ ಗೌಡ ಪಜಿಮಣ್ಣು ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ ಇವರು ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.ಶಾಲಾ ದೈಹಿಕಶಿಕ್ಷಣ ಸಹಶಿಕ್ಷಕರಾದ ದಾಮೋದರ,ಹರಿಣಾಕ್ಷಿ ಹಾಗೂ ಕೀರ್ತನ್ ಪಂದ್ಯಾಟ ಸಂಯೋಜಿಸಿದರು.

ಪಂದ್ಯಾಟ ವಿಜೇತರ ವಿವರ:
ಪ್ರಾಥಮಿಕ ವಿಭಾಗ
ಬಾಲಕರ ವಿಭಾಗ:
ಪ್ರಥಮ-ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಲಾಯಿ.
ದ್ವಿತೀಯ-ಸುದಾನ ವಸತಿಯುತ ಶಾಲೆ ಪುತ್ತೂರು.

ಬಾಲಕಿಯರ ವಿಭಾಗ:
ಪ್ರಥಮ-ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಲಾಯಿ.
ದ್ವಿತೀಯ-ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಉಪ್ಪಿನಂಗಡಿ.

ಪ್ರೌಢಶಾಲಾ ವಿಭಾಗ
ಬಾಲಕರ ವಿಭಾಗ:
ಪ್ರಥಮ-ಸುದಾನ ವಸತಿಯುತ ಶಾಲೆ ಪುತ್ತೂರು.
ದ್ವಿತೀಯ-ಸೈಂಟ್ ಆನ್ಸ್ ಕಡಬ.

ಬಾಲಕಿಯರ ವಿಭಾಗ:
ಪ್ರಥಮ-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು.
ದ್ವಿತೀಯ-ಸುದಾನ ವಸತಿಯುತ ಶಾಲೆ ಪುತ್ತೂರು.

೮ನೇ ತರಗತಿಯ ಪ್ರಾಥಮಿಕ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:
ಬಾಲಕರು:
ಮಹಮ್ಮದ್ ಸಾಬಿತ್ – ಸೈಂಟ್ ಜೋಕಿಮ್ಸ್ ಕಡಬ.
ಹಂಶಿಕ್ – ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು.

ಬಾಲಕಿಯರು:
ಸಮನ್ವಿತ -ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು.
ದಿಹರ್ಷ -ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು.

LEAVE A REPLY

Please enter your comment!
Please enter your name here