ರಸ್ತೆಯಲ್ಲಿ ಬಿಟ್ಟ ಬೆಕ್ಕುಗಳಿಗೆ ಆಶ್ರಯ ನೀಡುವ ಕೂಲಿ ಕಾರ್ಮಿಕ

0

 

ಪುತ್ತೂರು; ಮನೆಯಲ್ಲಿ ಬೆಕ್ಕು ಅಥವಾ ನಾಯಿ ಮರಿ ಹಾಕಿದರೆ ಅದು ಕಣ್ಣು ತೆರೆಯುವ ಮುನ್ನವೇ ರಸ್ತೆಗೆ ತಂದು ಬಿಡುತ್ತಾರೆ. ಯಾರಾದರು ಕೊಂಡು ಹೋಗಲಿ ಎಂಬ ಭಾವನೆಯಿಂದ ಅವುಗಳನ್ನು ತಂದು ಬಿಡುತ್ತಾರೆ. ಹೀಗೇ ರಸ್ತೆ ಬದಿಯಲ್ಲಿ ಬಿಟ್ಟ ಬೆಕ್ಕಿನ ಮರಿಗಳನ್ನು ಕೆಲವರು ಕೊಂಡು ಹೋಗುತ್ತಾರೆ ಮತ್ತೆ ಕೆಲವು ವಾಹನದಡಿಗೆ ಬಿದ್ದು ಸಾಯುತ್ತದೆ. ಯಾರಿಗೂ ಬೇಡವಾದರೆ ಅದನ್ನು ಅನ್ನ ಹಾಕಿ ಸಾಕಲು ಕುಂಬ್ರದ ಕೂಲಿ ಕಾರ್ಮಿಕರೋರ್ವರು ಮುಂದೆ ಬಂದಿದ್ದು ಕಳೆದ ಕೆಲವು ವರ್ಷಗಳಿಂದ ರಸ್ತೆಯಲ್ಲಿ ಅಲೆದಾಡುವ ಬೆಕ್ಕುಗಳಿಗೆ ಆಹಾರ ನೀಡುವ ಮೂಲಕ ಪ್ರಾಣ ಉಳಿಸುವ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.

 

ಕುಂಬ್ರದ ರಫೀಕ್ ಎಸ್ ಪಿ ಯವರೇ ಈ ಕಾಯಕವನ್ನು ಮಾಡುವ ಕೂಲಿ ಕಾರ್ಮಿಕ. ಕುಂಬ್ರ ಪರಿಸರದಲ್ಲಿ ಅನ್ನವಿಲ್ಲದೆ ಅಲೆದಾಡುತ್ತಿರುವ ಸುಮಾರು ೩೦ ಕ್ಕೂ ಮಿಕ್ಕಿ ಬೆಕ್ಕುಗಳಿಗೆ ಇವರು ನಿತ್ಯ ಅನ್ನ ಹಾಕುತ್ತಿದ್ದಾರೆ. ಇವರ ಮನೆಯ ಬಳಿಯೂ ಅನೇಕ ಬೆಕ್ಕುಗಳಿವೆ. ಮನೆಯಿಂದಲೇ ಅನ್ನವನ್ನು ತಂದು ಹಾಕುವ ಮೂಲಕ ಅವುಗಳನ್ನು ಸಲಹುತ್ತಿದ್ದು ಅಮಾನವೀಯ ರೀತಿಯಲ್ಲಿ ರಸ್ತೆ ಬದಿ ಬೆಕ್ಕುಗಳನ್ನು ಬಿಟ್ಟು ಹೋಗುವವರಿಗೆ ಮಾನವೀಯ ಪಾಠವನ್ನು ಕಲಿಸುತ್ತಿದ್ದಾರೆ. ಕೆಲಸ ಮುಗಿಸಿ ಇವರು ಕುಂಬ್ರ ಪೇಟೆಗೆ ಬಂದರೆ ಮೊದಲು ಮಾಡುವ ಕೆಲಸ ಬೆಕ್ಕುಗಳಿಗೆ ಅನ್ನ ಹಾಕುವುದು. ಒಂದು ದಿನ ಬಾರದೇ ಇದ್ದರೆ ಬೆಕ್ಕುಗಳು ಹುಡಕಾಡುತ್ತದೆ ಅನ್ನ ನೀಡುವ ಮಾಲಿಕನಿಗಾಗಿ. ಇವರ ಈ ಸೇವೆಯನ್ನು ಕಂಡು ಜನ ಅಭಿನಂದಿಸಿದ್ದಾರೆ.

ಮರಿಗಳನ್ನು ತಂದು ರಸ್ತೆ ಬದಿ ಬಿಟ್ಟು ಹೋಗಬಾರದು, ಅವುಗಳೂ ನಮ್ಮಂಥೆಯೇ, ಅವುಗಳಿಗೆ ಹಸಿವು ಇದೆ. ಈಗಾಗಲೇ ಸುಮಾರು ಮೂವತ್ತಕ್ಕೂ ಮಿಕ್ಕಿ ಬೆಕ್ಕುಗಳಿಗೆ ನಿತ್ಯ ಅನ್ನ ನೀಡುತ್ತಿದ್ದೇನೆ. ಬೆಕ್ಕುಗಳನ್ನು ಯಾರೂ ಮನೆಯ ಹತ್ತಿರ ಸುಳಯುವುದಕ್ಕೂ ಬಿಡದ ಕಾಲವಾಗಿದೆ. ಮುಕ ಪ್ರಾನಿಗಳಿಗೆ ಅನ್ನ ಹಾಕಿದರೆ ನಮಗೆ ಒಳ್ಳೆಯದಾಗುತ್ತದೆ ಎಂಬ ಭಾವನೆ ನನ್ನಲ್ಲಿದೆ. ಎಷ್ಟೇ ಬೆಕ್ಕುಗಳಿದ್ದರೂ ಅದಕ್ಕೆ ಅನ್ನ ಹಾಕುವೆ, ಅದೊಂದು ಪುಣ್ಯದ ಕೆಲಸವಾಗಿದೆ.

LEAVE A REPLY

Please enter your comment!
Please enter your name here