ಕಡಬ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ಮೊಂಟೆಸ್ಸರಿ ಶಿಕ್ಷಕಿ ತರಬೇತಿ ಪ್ರಾರಂಭ

0

ಕಡಬ: ಇಲ್ಲಿನ ಶ್ರೀ ಗಣೇಶ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಹಾಗೂ ಪಾಲಕರ ವಿಶೇಷ ಬೇಡಿಕೆಗೆ ಅನುಗುಣವಾಗಿ ಮೊಂಟೆಸ್ಸರಿ ಶಿಕ್ಷಕಿ ತರಬೇತಿ (ಡಿ.ಎಮ್.ಇ.ಡಿ) ಪ್ರಾರಂಭಗೊಂಡಿದೆ.

ಎಲ್.ಕೆ.ಜಿ, ಯುಕೆಜಿ 1ರಿಂದ 5ನೇ ತರಗತಿಗೆ ಪಾಠ ಮಾಡಲು ಅರ್ಹವಾದ ತರಬೇತಿ ಇದಾಗಿದ್ದು, ದ್ವಿತಿಯ ಪಿಯುಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು, ತರಬೇತಿ ಅವಧಿಯು 1 ವರ್ಷ ಆಗಿರುತ್ತದೆ. ಅಲ್ಲದೆ ವಿದ್ಯಾಸಂಸ್ಥೆಯಲ್ಲಿ 7,8,9ನೇ ತರಗತಿ ಅನುತ್ತೀರ್ಣರಾದವರಿಗೆ ನೇರವಾಗಿ ಎಸ್.ಎಸ್.ಎಲ್.ಸಿ. ಮತ್ತು ಪ್ರಥಮ ಪಿಯುಸಿ ಅನುತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು. ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಆಯಾಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಟ್ಯೂಷನ್ ನೀಡಲಾಗುವುದು. ಎಲ್.ಕೆ.ಜಿ.ಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಎಲ್ಲಾ ವಿಷಯಗಳಿಗೆ ಟ್ಯೂಷನ್ ನೀಡಲಾಗುವುದು, ಮತ್ತು ಕೇಂದ್ರ ಸರಕಾರದ 2022-23ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಗೆ ವಿಶೇಷ ಕೋಚಿಂಗ್ ಕೂಡ ನೀಡಲಾಗುವುದು ಆಸಕ್ತರು ವಿದ್ಯಾಸಂಸ್ಥೆಯ ಸಂಚಾಲಕರು ಅಥವ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here