ರಾಮಕುಂಜ-ಹಳೆನೇರೆಂಕಿ ವರಮಹಾಲಕ್ಷ್ಮೀ ಪೂಜಾ ಸಮಿತಿ : ಅಧ್ಯಕ್ಷೆ; ಮಂಜುಳಾ, ಕಾರ್ಯದರ್ಶಿ: ವಿಮಲಾ, ಕೋಶಾಧಿಕಾರಿ; ತೇಜಸ್ವಿನಿ

0

ರಾಮಕುಂಜ: 18ನೇ ವರ್ಷದ ರಾಮಕುಂಜ-ಹಳೆನೇರೆಂಕಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪೂರ್ವಭಾವಿ ಸಭೆ ರಾಮಕುಂಜ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮಂಜುಳಾ ಚಂದ್ರಶೇಖರ್ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ವಿಮಲಾ ಕರುಣಾಕರ ಆರಿಂಜ, ಕೋಶಾಧಿಕಾರಿಯಾಗಿ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪಲತಾ ಬರೆಂಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ವಸಂತಿ ಕನೆಮಾರ್‌ರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರಮೀಳಾ ಹೇಮಾಕ್ಷ, ಸುಚೇತಾ ಬರೆಂಬೆಟ್ಟು, ಲೀಲಾವತಿ ಪಿ.ಟಿ., ಹೇಮಾವತಿ ಹಲ್ಯಾರ, ಜಾಹ್ನವಿ ಹೇಮಚಂದ್ರ ಕಟ್ಟಪುಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here