ಪುತ್ತೂರು:ಪುತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ವಿಜಯಲಕ್ಷ್ಮೀ ಸಂಕೀರ್ಣದಲ್ಲಿ ಡಾ.ಶೈಲೇಶ್ ಅವರ ಆಯುರ್ವೇದ ಕ್ಲಿನಿಕ್ ` ಶ್ರೀ ದುರ್ಗಾ ಕ್ಲಿನಿಕ್’ ಜು.20ರಂದು ಶುಭಾರಂಭಗೊಂಡಿತು.
ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ನ ಡಾ.ಸುರೇಶ್ ಪುತ್ತೂರಾಯ ಅವರು ನೂತನ ಕ್ಲಿನಿಕ್ ಉದ್ಘಾಟಿಸಿ ಶುಭ ಹಾರೈಸಿದರು.ಡಾ.ಶೈಲೇಶ್ ಅವರ ತಾಯಿ ಸುಮಿತ್ರಾ, ತಂದೆ ಶ್ರೀಧರ ಭಾಗವತ, ಮಾವ ಶೈಲೇಂದ್ರ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ವಿಷ್ಣುಮೂರ್ತಿ ಕೇಕುಣ್ಣಾಯ, ನಿವೃತ್ತ ಪ್ರಾಂಶುಪಾಲ ಸುಬ್ರಮಣ್ಯ ಕೆದಿಲಾಯ, ಸತೀಶ ಕೆದಿಲಾಯ, ಶ್ರೀಮತಿ ಮತ್ತು ವೆಂಕಟರಮಣ ಭಾಗವತ, ಗಣೇಶ ಕೇಕುಣ್ಣಾಯ, ಶ್ರೀಕರ, ಪ್ರೇಮ, ಸೀತಾರತ್ನ, ಶುಭಗಣೇಶ, ಡಾ.ಶೈಲೇಶ್ ಅವರ ಪುತ್ರ ಸಾತ್ಯಕಿ, ಸಹೋದರ ಶರತ್ ಮತ್ತು ಅವರ ಪುತ್ರಿ ಉಪಸ್ಥಿತರಿದ್ದರು. ಡಾ.ಶೈಲೇಶ್ ಅವರ ಪತ್ನಿ ರಮ್ಯ ಅತಿಥಿಗಳನ್ನು ಬರಮಾಡಿಕೊಂಡರು.