ಅಮೃತ್ ಸರೋವರ್ ಯೋಜನೆ: ಪುತ್ತೂರು, ಕಡಬದ 15 ಸೇರಿ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿ

0

  • ತಿಂಗಳಲ್ಲಿ 15 ಕೆರೆಗಳ ಅಭಿವೃದ್ಧಿ ಪೂರ್ಣ
  • ಕೆರೆಗಳ ತಟದಲ್ಲೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಕೇಂದ್ರ ಸರಕಾರದ ಅಮೃತ್ ಸರೋವರ್ ಯೋಜನೆಯಡಿ ಅಭಿವೃದ್ಧಿಪಡಿಸಲು ಪುತ್ತೂರು, ಕಡಬ ತಾಲೂಕಿನ 15 ಕೆರೆಗಳು ಸೇರಿದಂತೆ ಜಿಲ್ಲೆಯ 75 ಬೃಹತ್ ಕೆರೆಗಳನ್ನು ಗ್ರಾ.ಪಂ ವಾರು ಗುರುತಿಸಲಾಗಿದೆ. ಕೆಲವು ಗ್ರಾ.ಪಂ. ಗಳಲ್ಲಿ ಎರಡು ಅಥವಾ ಮೂರು ಕೆರೆಗಳನ್ನು ಗುರುತಿಸಲಾಗಿದೆ.

ಪ್ರಧಾನಮಂತ್ರಿ ಮಿಷನ್ ಅಮೃತ್ ಸರೋವರ್ ಕಾರ್ಯಕ್ರಮದಡಿ ಕೆರೆಗಳ ಆಯ್ಕೆಗೆ ಜಿ.ಪಂ. ಸಿಇಓ ಅಧ್ಯಕ್ಷತೆಯಲ್ಲಿ ಅಪರ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಯ ನಾಲ್ವರು ಅಧಿಕಾರಿಗಳು, ಪಂಚಾಯತ್ ಪಿಡಿಒ ಸದಸ್ಯರಾಗಿರುವ ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸದಸ್ಯ ಕಾರ್ಯದರ್ಶಿಯಾಗಿರುವಂತೆ ಸಮಿತಿ ರಚನೆ ಮಾಡಲಾಗಿದೆ. ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಕೆರೆಯ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ, ನರೇಗಾದಡಿಯಲ್ಲಿ ಹೂಳೆತ್ತುವ ಪ್ರಕ್ರಿಯೆ, ನರೇಗಾ ಹಾಗೂ ವಿವಿಧ ಅನುದಾನದಡಿ ಅಭಿವೃದ್ಧಿ ಪಡಿಸಲಾಗುತ್ತದೆ. ಸಿಎಸ್‌ಆರ್ ನಿಧಿಯನ್ನೂ ಬಳಿಸಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಅಮೃತ್ ಸರೋವರ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆರೆಗಳನ್ನು ಗುರುತಿಸಲಾಗಿದೆ. ಆಗಸ್ಟ್ 15ರೊಳಗೆ 15 ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಕೆರೆಗಳ ಪಕ್ಕದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ಬಾಕಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಜಿ.ಪಂ. ಸಿಇಒ ಡಾ| ಕುಮಾರ್ ತಿಳಿಸಿದ್ದಾರೆ.

ದ.ಕ ಜಿಲ್ಲೆಯ ಕೆರೆಗಳು

ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ, ಕಡಬದ ಕುಟ್ರುಪ್ಪಾಡಿ, ಸುಬ್ರಹ್ಮಣ್ಯ, ಪುತ್ತೂರಿನ ಆರ್ಯಾಪು, ಉಪ್ಪಿನಂಗಡಿ, ಸುಳ್ಯದ ಬಾಳಿಲ, ಮುರುಳ್ಯ ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಇರ್ವತ್ತೂರು, ಸಜಿಪಪಡು, ಕುರ್ನಾಡು, ಕಾವಳಮುಡೂರು, ಕರಿಯಂಗಳ, ಪುದು, ಬಾಳೆಪುಣಿ, ಕೊಳ್ನಾಡು, ಬಡಗಬೆಳ್ಳೂರು, ನರಿಕೊಂಬು, ಬಾಳ್ತಿಲ, ಕಳ್ಳಿಗೆ, ಇಡ್ಕಿದು, ಬೆಳ್ತಂಗಡಿಯ ವೇಣೂರು, ನಾರಾವಿ,ನೆರಿಯ, ಚಾರ್ಮಾಡಿ, ಕೊಕ್ಕಡ, ಪಡಂಗಡಿ,ಉಜಿರೆ, ನಾವೂರು, ಸುಲ್ಕೇರಿ, ಮಡಂತ್ಯಾರು, ಹೊಸಂಗಡಿ, ಕಡಬ ತಾಲೂಕಿನ ಬಾರ್ಯ, ನೆಲ್ಯಾಡಿ, ರಾಮಕುಂಜ, ಪೆರಾಬೆ, ಐತೂರು,ಸವಣೂರು, ಸುಬ್ರಹ್ಮಣ್ಯ ಮಂಗಳೂರು ತಾಲೂಕಿನ ಗುರುಪುರ, ಬಳ್ಕುಂಜೆ, ಕಂದಾವರ, ಪಡುಪಣಂಬೂರು, ಮುನ್ನೂರು, ಕೊಣಾಜೆ,ಅತಿಕಾರಿಬೆಟ್ಟು, ಮೂಡಬಿದಿರೆ ತಾಲೂಕಿನ ತೆಂಕಮಿಜಾರು, ದರೆಗುಡ್ಡೆ, ಪುತ್ತೂರಿನ ಅರಿಯಡ್ಕ, ಬಡಗನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಬನ್ನೂರು, ಹಿರೆಬಂಡಾಡಿ, ಉಪ್ಪಿನಂಗಡಿ ಬೆಟ್ಟಂಪಾಡಿ,ಸುಳ್ಯದ ಜಾಲ್ಸೂರು, ಹರಿಹರಪಳ್ಳತ್ತಡ್ಕ, ಬೆಳ್ಳಾರೆ, ದೇವಚಳ್ಳ, ಉಬರಡ್ಕ, ಮಿತ್ತೂರು, ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯ ಕೆರೆ ಅಭಿವೃದ್ಧಿ ನಡೆಯಲಿದೆ.

LEAVE A REPLY

Please enter your comment!
Please enter your name here