ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಶಾಲಾ ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು ಅವರು ಉದ್ಘಾಟಿಸಿದರು. ಮಾತನಾಡುತ್ತಾ ಅವರು ವಿದ್ಯಾರ್ಥಿ ಸಂಘ ಎಂಬುದು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿಯೂ ತೊಡಗಿಕೊಳ್ಳಬೇಕಾದ ಒಂದು ವ್ಯವಸ್ಥೆ ಎಂದರು. ವಿದ್ಯಾರ್ಥಿ ಸಂಘದ ಮೂಲಕ ಬರುವ ಯಾವುದೇ ಧನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಒದಗಿಸಿಕೊಡಲು ನನ್ನ ಆಡಳಿತ ಮಂಡಳಿ ಸಿದ್ಧವಿದೆ ಎಂದರು.

 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಪೂರ್ವ ರೋಟರಿಯ ಅಧ್ಯಕ್ಷ ರೊ. ಶರತ್ ಕುಮಾರ್ ರೈಯವರು ಮಾತನಾಡುತ್ತಾ ಹಕ್ಕುಗಳಿಗಿಂತ ಮೊದಲು ಕರ್ತವ್ಯದ ಕಡೆಗೆ ಗಮನ ಹರಿಸಬೇಕು ಎಂದು ಕರೆಕೊಟ್ಟರು.  ನಾಯಕನಾದವನು ಎಲ್ಲರ ಹೃದಯ ಗೆಲ್ಲುವ ಕೆಲಸ ಮಾಡಿದಾಗ ಮಾತ್ರವೇ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್‌ ಎಲ್‌ ಶೆಟ್ಟಿ ರವರು  ಸಂಧರ್ಬೊಚಿತವಾಗಿ ಮಾತನಾಡಿದರು. ಪ್ರಾಂಶುಪಾಲ ಸೀತಾರಾಮ ಕೇವಳ ಪ್ರತಿಜ್ಞಾ ವಿಧಿ ಬೋಧಿಸಿದರು. ೧೦ನೆ ತರಗತಿಯ ರಿಫಾಹ ಫಾತಿಮಾ ಸ್ವಾಗತ, ಸನಾ ಫಾತಿಮಾ ಅತಿಥಿಗಳ ಪರಿಚಯ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಾನ್ವಿ ಬಿ.ಸಿ. ಕಾರ್ಯಕ್ರಮದ ನಿರೂಪಣೆ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣವ್ ಕೆ.ಯು. ವಂದನಾರ್ಪಣೆಗಳಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here