ಮರ್ದಾಳ: ಅಟೋ ಚಾಲಕರೋರ್ವರಿಗೆ 50 ರೂ. ಜೆರಾಕ್ಸ್ ನೋಟು ನೀಡಿ ವಂಚನೆ

0

ಕಡಬ:ಬಾಡಿಗೆಗೆ ತೆರಳಿದ್ದ ಆಟೋ ಚಾಲಕರೊಬ್ಬರಿಗೆ ಮರ್ದಾಳ ಪರಿಸರದಲ್ಲಿ 50 ರೂ. ಮುಖ ಬೆಲೆಯ ಜೆರಾಕ್ಸ್ ನೋಟು ನೀಡಿ ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ಮರ್ದಾಳದ ಹಿಂದೂ ಸ್ಥಾನ್ ಹೆಸರಿನ ಆಟೋ ಚಾಲಕ ಹೈದರ್ ಎಂಬವರಿಗೆ ಈ ಜೆರಾಕ್ಸ್ ನೋಟು ಸಿಕ್ಕಿದೆ.


ಜುಲೈ 20ರಂದು ನೆಟ್ಟಣ ರೈಲು ನಿಲ್ದಾಣಕ್ಕೆ ಬಾಡಿಗೆ ಇತ್ತು.ಹೀಗಾಗಿ ಅಲ್ಲಿ ಪ್ರಯಾಣಿಕನಿಗೆ ಚಿಲ್ಲರೆ ಕೊಡುವ ವೇಳೆ 50 ರೂ ನೋಟು ಬಣ್ಣ ಕಳೆದು ಕೊಂಡ ರೀತಿಯಲ್ಲಿ ಕಾಣಿಸಿದೆ. ನಂತರ ಈ ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಜೆರಾಕ್ಸ್ ನೋಟು ಎಂದು ತಿಳಿದು ಬಂದಿದೆ.

 ಜೆರಾಕ್ಸ್ ನೋಟು ನೀಡಿ ಯಾರೋ ನನಗೆ ಮೋಸಮಾಡಿದ್ದು ಎಲ್ಲಾ ಚಾಲಕರು,ಅಂಗಡಿಯವರು ನೋಟು ಸ್ವೀಕರಿಸುವ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಕಡಬ ಸಮೀಪದ ಕೋಡಿಂಬಾಳದಲ್ಲಿ ಚಿಕನ್ ಸೆಂಟರ್ ನಲ್ಲಿ 100ರೂ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿತ್ತು.ಪೊಲೀಸರು ಆಗಮಿಸಿ ಪರಿಶೀಲಿಸಿದ್ದರು.

LEAVE A REPLY

Please enter your comment!
Please enter your name here