ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಿಶೇಷ ಸಾಧನೆ ವಿಶ್ವವಿದ್ಯಾನಿಲಯ ಮಟ್ಟದ ಗುಡ್ಡಗಾಡು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ

0

 

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಶೇಷ ಸಾಧನೆಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡದ ಹುರಿಕಡ್ಲೆ ಅಜ್ಜ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಗುಡ್ಡಗಾಡು ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬಾಲಕರ ತಂಡ ಚಿನ್ನವನ್ನು ಪಡೆದುಕೊಂಡಿದ್ದು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬಾಲಕಿಯರ ತಂಡ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಇದರ ಜೊತೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 4ನೇ ವರ್ಷದ ಬಿ.ಎ ಎಲ್.ಎಲ್.ಬಿ ವಿದ್ಯಾರ್ಥಿ ದಿಸ್ತಾಯ್ ಪಾವ್ ಹಾಗೂ ಪ್ರಥಮ ಬಿ.ಎ ಎಲ್.ಎಲ್.ಬಿ ವಿದ್ಯಾರ್ಥಿ ವಿಜಯ್ ಶ್ರೀಹರಿ ವೈಯಕ್ತಿಕ ಸಾಧನೆಯ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದರೇ, ಅಭಿಜಿತ್ ಪಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ.

ಜೊತೆಗೆ ಹುಡುಗಿಯರ ವಿಭಾಗದಲ್ಲಿ 5ನೇ ವರ್ಷದ ಬಿ.ಎ ಎಲ್.ಎಲ್.ಬಿ ವಿದ್ಯಾರ್ಥಿನಿ ಲವೀನಾ ಡಿಸೋಜಾ ಮತ್ತು ಪೂರ್ಣಿಮಾ ಕೆ ವೈಯಕ್ತಿಕವಾಗಿ 5 ಮತ್ತು 6ನೇ ಸ್ಥಾನವನ್ನು ಮತ್ತು ಪಡೆದುಕೊಂಡು ಸಾಧನೆಯನ್ನು ಮಾಡಿದ್ದಾರೆ.

ಚಿನ್ನದ ಪದಕ ಗಳಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹುಡುಗರ ತಂಡದಲ್ಲಿ 3ನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿ ಜ್ಞಾನೇಶ್ ಪಿ.ವಿ., 5ನೇ ವರ್ಷದ ಬಿ.ಎ ಎಲ್.ಎಲ್.ಬಿ.ಯ ಚಂಗಪ್ಪ ಕೆ.ಎಂ, 4ನೇ ವರ್ಷದ ಬಿ.ಎ ಎಲ್.ಎಲ್.ಬಿ. ಯ ದಿಸ್ತಾಯ್ ಪಾವಾ, ಅಭಿಜಿತ್ ಪಿ, 2ನೇ ವರ್ಷದ ಎಲ್.ಎಲ್.ಬಿ.ಯ ಗುರುತೇಜ್ ಶೆಟ್ಟಿ, 2ನೇ ವರ್ಷದ ಎಲ್.ಎಲ್.ಬಿ.ಯ ವೀಕ್ಷಿತ್ ಇ.ಡಿ, ಪ್ರಥಮ ಬಿ.ಎ ಎಲ್.ಎಲ್.ಬಿ ವಿದ್ಯಾರ್ಥಿ ವಿಜಯ್ ಶ್ರೀಹರಿ, ಕೌಶಿಕ್ ಜೆ ಹಾಗೂ ಮನೀಶ್ ಟಿ ಈ ಸಾಧನೆಯನ್ನು ಮಾಡಿದ್ದಾರೆ.

ಅದೇ ರೀತಿ ಬೆಳ್ಳಿ ಪದಕ ಗೆದ್ದ ಹುಡುಗಿಯರ ತಂಡದಲ್ಲಿ 5ನೇ ವರ್ಷದ ಬಿ.ಎ ಎಲ್.ಎಲ್.ಬಿ.ಯ ಲವೀನಾ ಡಿಸೋಜಾ, ಪೂರ್ಣಿಮಾ ಕೆ, 3ನೇ ವರ್ಷದ ಎಲ್.ಎಲ್.ಬಿ.ಯ ಹೇಮಲತಾ ಕೆ, 3ನೇ ವರ್ಷದ ಬಿ.ಎ ಎಲ್.ಎಲ್.ಬಿ.ಯ ಸ್ವರ್ಣಗೌರಿ, ಪ್ರಥಮ ಬಿ.ಎ ಎಲ್.ಎಲ್.ಬಿ.ಯ ವೃಂದಾ ಹಾಗೂ ಯಶ್ವಿತಾ ಈ ಸಾಧನೆಯನ್ನು ಮಾಡಿದ್ದಾರೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ ಕೆ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳು ಈ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here