ಕಲ್ಲಾರೆ ಕಿರಣ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ

0

  • ಮನೆಗೆ ಬೆಳಕಾಗಿ ಊರಿನ ಮನೆಗಳಿಗೂ ಬೆಳಕನ್ನು ಕೊಟ್ಟವರು – ಸುಧಾಕರ್ ಶೆಟ್ಟಿ

ಪುತ್ತೂರು : ಬೊಳುವಾರು ಸೋಲಾರ್ ಮ್ಯಾಟ್ರಿಕ್ಸ್ನ ಮಾಲಕರಾಗಿದ್ದ ಕಲ್ಲಾರೆ ನಿವಾಸಿ ಕಿರಣ್ ಶೆಟ್ಟಿಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜು.21ರಂದು ನಡೆಯಿತು. ಸುಧಾಕರ್ ಶೆಟ್ಟಿ ಉಪ್ಪಿನಂಗಡಿ ಕರ‍್ಯಕ್ರಮ ನಿರೂಪಿಸಿ ಮಾತನಾಡಿ ಕಿರಣ್ ಶೆಟ್ಟಿಯವರು ತಂದೆ ತಾಯಿಯಿಂದ ಉತ್ತಮ ಸಂಸ್ಕಾರ ಕಲಿತು ಮನೆಯ ಜವಾಬ್ದಾರಿ ನಿರ್ವಹಿಸಿಕೊಂಡು ಬಂದವರು. ಪುತ್ತೂರಿನಲ್ಲಿ ಕಳೆದ 25 ವರ್ಷಗಳಿಂದ ಉದ್ಯಮಿಯಾಗಿ, ಮನೆಗೆ ಬೆಳಕಾಗಿದ್ದು ಅಲ್ಲದೆ ಊರಿನ ಕೆಲವೊಂದು ಮನೆಗೂ ಬೆಳಕನ್ನು ಕೊಟ್ಟವರು. ಪ್ರತಿಯೊಬ್ಬರಿಗೂ ಸಾವು ನಿಶ್ಚಿತ. ಅನಿರೀಕ್ಷಿತ ಸಾವಿನಿಂದ ಅಘಾತವಾಗುವುದು ಸಹಜ. ಕಿರಣ್ ಶೆಟ್ಟಿಯವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಮನೆಯವರಿಗೆ ಆ ಭಗವಂತನು ನೀಡಲಿ. ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ಅಹಲ್ಯ ಶೆಟ್ಟಿ, ತಂದೆ ವಿಶ್ವನಾಥ ಶೆಟ್ಟಿ, ತಾಯಿ ಹರಿಣಿ ವಿ. ಶೆಟ್ಟಿ, ಪುತ್ರಿಯರಾದ ಮಾನ್ಯ, ಮೌಲ್ಯ ಶೆಟ್ಟಿ, ತಂಗಿ ಶಿಲ್ಪಾ ಶೆಟ್ಟಿ, ಅಕ್ಷತಾ ಶೆಟ್ಟಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸುದೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಕೊಂಬೆಟ್ಟು, ಹರೀಶ್ ಕುಮಾರ್, ನವೀನ್ ನಾಕ್, ಪ್ರಸನ್ನ ಕುಮಾರ್, ಸುಧೀರ್ ಶೆಟ್ಟಿ, ಸುಧೀರ್ ಶೆಟ್ಟಿ ಪಂಜಲ, ಪನವ ಶೆಟ್ಟಿ, ಕುಂಬ್ರ ದಯಾಕರ ಆಳ್ವ, ಡಾ. ಪ್ರೀತಂ ಎ.ಜೆ ಹಾಸ್ಪಿಟಲ್, ಗಿರೀಶ್ ಶೆಟ್ಟಿ, ಧ್ರುವ್ ಶೆಟ್ಟಿ, ಜಶನ್ ಶೆಟ್ಟಿ, ಧನ್ವಿ ಶೆಟ್ಟಿ, ಕುಸುಮಾವತಿ ನಾಯಿಲ, ರಾಮಕೃಷ್ಣ ರೈ, ಪ್ರೇಮ, ಸುಜಿತ್, ಸುಗುಣ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here