ಟೈಲರ‍್ಸ್ ವೃತ್ತಿ ಬಾಂಧವರ ಬೇಡಿಕೆ ಈಡೇರಿಸಲಾಗ್ರಹಿಸಿ ಜು.೨೬ರಂದು ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ

0

ಪುತ್ತೂರು: ಟೈಲರ್‌ಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನ್ಲಲಿ ನಮ್ಮ ಕರ್ನಾಟಕ ಸ್ಟೇಟ್ ಟೈರ‍್ಸ್ ಅಸೋಸಿಯೇಶನ್ ಕಾರ್ಯನಿರ್ವಹಿಸುತ್ತಿದ್ದು. ಟೈಲರ್‌ಗಳ ಬಾಳಿನ ಆಶಾಕಿರಣವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತಿದೆ. ಆದರೆ ನಮ್ಮ ಕಾರ್ಯಗಳಿಗೆ ಸರ್ಕಾರದ ಸವಲತ್ತಿನ ಸಹಕಾರವೂ ಬೇಕಾಗಿದ್ದು. ಈ ಕಾರಣಕ್ಕಾಗಿ ಕಳೆದ 24 ವರ್ಷಗಳಿಂದ ಸರಕಾರದ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಿದ್ದು ಶಾಂತಿಯುತ ಪ್ರತಿಭಟನೆಯನ್ನೂ ಮಾಡಿವೆ ಆದರೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ ಸರ್ಕಾರಕ್ಕೆ ತೆರಿಗೆಯನ್ನು ನೀಡುವ ನಮಗೆ ಕನಿಷ್ಠ ಜೀವನ ಭದ್ರತೆ ಒದಗಿಸುವ ಕ್ಷೇಮನಿಧಿ ದೊರೆಯದೇ ಇದ್ದು ಇದರ ಜಾರಿಗೂ ಸರ್ಕಾರ ಮೀನಾಮೇಷ ಎನಿಸುತ್ತಿರುವುದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜು.26ರಂದು ಪ್ರತಿಭಟನಾ ಮೆರವಣಿಗೆಯ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಲಾಗುವುದು, 15 ದಿನಗಳೊಳಗಾಗಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿವೆ ಎಂದು ಕರ್ನಾಟಕ ಸ್ಟೇಟ್ ಟೈರ‍್ಸ್ ಎಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷ ಜಯಂತ ಉರ್ಲಾಂಡಿ ಹೇಳಿದರು. ಅವರು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಜು.21ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ಸ್ಟೇಟ್ ಟೈರ‍್ಸ್ ಎಸೋಸಿಯೇಷನ್ ರಾಜ್ಯ ಸಮಿತಿಯ ಪದಾಧಿಕಾರಿ ರಘುನಾಥ ಬಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಧರಣಿ ಮುಷ್ಕರ ಮಾಡಿದೆವು ಬಳಿಕ, ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ, ಬೆಂಗಳೂರು ಜನಜಾಗೃತಿ ಜಾಥಾ, ಕಾರ್ಡ್ ಚಳುವಳಿ ಹೀಗೆ ಅನೇಕ ಹೋರಾಟಗಳನ್ನು ಮಾಡಿವೆ. ಕೇರಳ, ಆಂಧ್ರ, ತೆಲಂಗಾಣ ಸರ್ಕಾರಗಳು ಟೈಲರ್ ಗಳಿಗೂ ಜೀವನ ಭದ್ರತೆಯ ಯೋಜನೆಗಳನ್ನು ಹಮ್ಮಿಕೊಂಡಿದೆ ಅಂತೆಯೇ ಕರ್ನಾಟಕ ಸರ್ಕಾರವು ಇಲ್ಲಿನ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಸವಲತ್ತುಗಳನ್ನು ಟೈಲರ್ ಗಳಿಗೂ ನೀಡಬೇಕು. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೂ ಟೈಲರ್ ವೃತ್ತಿ ಒಂದು ಸಾಧ್ಯತೆಯಾಗಿದೆ ಆದ್ದರಿಂದ ಸರ್ಕಾರ ಟೈಲರ್‌ಗಳಿಗೆ ಬೇಕಾದ ಸವಲತ್ತುಗಳನ್ನು ನೀಡಿದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದರು.
ಕರ್ನಾಟಕ ಸ್ಟೇಟ್ ಟೈರ‍್ಸ್ ಎಸೋಸಿಯೇಷನ್ ಪುತ್ತೂರು ತಾಲೂಕು ಅಧ್ಯಕ್ಷ ಜಯರಾಮ ಬಿ.ಎನ್ ಮಾತನಾಡಿ ರಾಜ್ಯ ಸಮಿತಿಯ ತೀರ್ಮಾನದಂತೆ ಜು.26ರಂದು ಮೆರವಣಿಗೆಯ ಮೂಲಕ ಸಾಗಿ ಜಿಲ್ಲಾಧಿಕಾರಿಗೆ ಟೈಲರ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡುವ ಕಾರ್ಯಕ್ರಮಗಳು ನಡೆಯುತ್ತಿದೆ, ಪುತ್ತೂರು ಕ್ಷೇತ್ರ ಸಮಿತಿಯಲ್ಲಿ ಒಂಭತ್ತು ವಲಯಗಳಿದ್ದು ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿಕೊಂಡಿವೆ, ಎಲ್ಲರೂ ಆ ದಿನ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಬಾಗಹಿಸುವಂತೆ ಕೇಳಿಕೊಂಡಿವೆ. ಪುತ್ತೂರಿನಿಂದ ಒಟ್ಟು 400ಕ್ಕಿಂತ ಹೆಚ್ಚು ಮಂದಿ ವೃತ್ತಿ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ವೃತ್ತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕು. ಪ್ರತಿಭಟನೆಯಲ್ಲಿ ಭಾಗಿಯಾಗುವುದರ ಫಲವನ್ನು ಮುಂದಿನ ದಿನಗಳಲ್ಲಿ ನಾವು ಪಡೆದುಕೊಳ್ಳಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸ್ಟೇಟ್ ಟೈರ‍್ಸ್ ಎಸೋಸಿಯೇಷನ್ ಪುತ್ತೂರು ನಗರ ಅಧ್ಯಕ್ಷ ಯಶೋಧರ ಜೈನ್, ರಮೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here