ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್-2022

0

ಶಿಕ್ಷಣ ಸೇವೆಯಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ-ಟಿ.ಕೆ. ಉಮ್ಮರ್

ಎಸ್.ಎಸ್.ಎಲ್.ಸಿ., ಪಿಯುಸಿ.ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಉಪ್ಪಿನಂಗಡಿ: ಸಮುದಾಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಹಳಷ್ಟು ಕುಟುಂಬಗಳಲ್ಲಿ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗುತ್ತಾರೆ. ಆಂತಹವರನ್ನು ಗುರುತಿಸಿ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಶಿಕ್ಷಣ ಸೇವೆ ಮಾಡಿದಾಗ ಮಾತ್ರ ಮುಸ್ಲಿಂ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಿಕ್ಷಣ ತಜ್ಞ ಉಮ್ಮರ್ ಟಿ.ಕೆ. ಹೇಳಿದರು.

ಜುಲೈ 21ರಂದು ಹಿದಾಯ ಪೌಂಡೇಷನ್ ವತಿಯಿಂದ ಕಾವಲಕಟ್ಟೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್-2022 ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿ ಮಾತನಾಡಿ ನಮ್ಮ ಸಮುದಾಯದಲ್ಲಿ ಬಹಳಷ್ಟು ಮಂದಿ ಹೃದಯ ಶ್ರೀಮಂತಿಕೆಯ ದಾನಿಗಳಿದ್ದಾರೆ ಸಂಘಟನೆಗಳು ಅವರನ್ನು ಬಳಸಿಕೊಂಡು ಸಮುದಾಯದಲ್ಲಿ ಕಾಡುತ್ತಿರುವ ಹಸಿವು, ಶಿಕ್ಷಣ, ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಅದರಲ್ಲೂ ಸಾಧ್ಯವಾದಷ್ಟು ಗ್ರಾಮೀಣ ಭಾಗದ ಜಮಾಅತ್‌ಗಳಿಗೆ ವಿಸ್ತಾರಗೊಳಿಸಬೇಕು ಎಂದು ಹೇಳಿದರು. ಕೆಮ್ಮಾರ ಸಂಶುಲ್ ಉಲೇಮಾ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ ಮಾತನಾಡಿ ನಾವೀಗ ಕಂಪ್ಯೂಟರ್ ಯುಗದಲ್ಲಿದ್ದೇವೆ, ಜಗತ್ತಿನ ನಿಯಮ ಬದಲಾಗುವಾಗ ನಾವುಗಳೂ ಬದಲಾಗಬೇಕಾಗುತ್ತದೆ, ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕಾದ ಅನಿವರ‍್ಯತೆ ಇದ್ದು, ಇಂತಹ ಸಂಸ್ಥೆಗಳು ಮುಂದೆ ಬಂದಾಗ ಮಾತ್ರ ಸಮುದಾಯದಲ್ಲಿರುವ ಕೀಳರಿಮೆ ದೂರವಾಗಲು ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ಲೋಬಲ್ ಚೇರ್‌ಮೆನ್ ಮನ್ಸೂರ್ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿದಾಯ ಸಂಸ್ಥೆ ಕಳೆದ 18 ವರ್ಷಗಳಿಂದ ನಿರಂತರವಾಗಿ ಪ್ರತೀ ತಿಂಗಳು 250 ಕುಟುಂಬಕ್ಕೆ ಆಹಾರ ಪೂರೈಕೆ ಮಾಡುತ್ತಿದೆ. ಕಾವಲಕಟ್ಟೆಯಲ್ಲಿ ಹಿದಾಯ ಕಾಲೋನಿಯಲ್ಲಿ 55 ಕುಟುಂಬಗಳಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿನ 89 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮತ್ತು 39 ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಶಾಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಮಂಗಳೂರುನ್ನು ಕೇಂದ್ರವಾಗಿರಿಸಿಕೊಂಡು ಯೋಜನೆಯನ್ನು ರೂಪಿಸಲಾಗಿದ್ದು, ಸಹೃದಯಿ ದಾನಿಗಳು ಇದಕ್ಕೆ ಕೈಜೋಡಿಸಬೇಕು ಎಂದರು.

ಕೆ.ಎಂ.ಸಿ. ಸಂಸ್ಥೆಯ ಸಿ.ಇ.ಒ. ಸಗೀರ್ ಸಿದ್ದಿಕ್, ಗ್ಲೋಬಲ್‌ನ ನಿಕಟಪೂರ್ವ ಅಧ್ಯಕ್ಷ ಝಕರಿಯಾ ಜೋಕಟ್ಟೆ, ಪದಾಽಕಾರಿಗಳಾದ ಖಾಸಿಂ ಅಹಮದ್, ಝೀಯಾದ್, ದುಬಾಯಿ ಘಟಕದ ಅಹಮದ್ ಬಾವಾ, ಜೆದ್ದಾ ಘಟಕದ ಶರೀ-ï, ಮಸ್ಕತ್‌ನ ಅಬ್ಬಾಸ್ ಉಚ್ಚಿಲ, ಕತಾರ್‌ನ ಶಾಕಿರ್ ರಜಾಕ್, ದಮ್ಮಾಮ್‌ನ ಹಂಝದ್ ಖಾನ್, ಜುಬೈಲ್‌ನ ಅಶ್ರಫ್, ರಿಯಾದ್ ಘಟಕದ ಸಮೀರ್ ಕರ‍್ಯಯೋಜನೆಗಳ ಬಗ್ಗೆ ಮಾತನಾಡಿದರು.‌

ಸಮಾರಂಭದಲ್ಲಿ ಉದ್ಯಮಿಗಳಾದ ರಿಯಾಝ್ ಬಾವಾ, ಮುಸ್ತಫಾ ಜೋಕಟ್ಟೆ, ಅಬ್ದುಲ್ ರಹಿಮಾನ್ ಕಣಚೂರು, ಡಾ. ಮಹಮ್ಮದ್ ಸಮೀರ್, ಡಾ. ಹಾರೂನ್, ಡಾ. ತಾಜುದ್ದೀನ್ ಡಾ. ಮುಬಶ್ಸಿರ್, ಡಾ. ಸಮೀನ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸಿದ ಶಹಝಿನ್ ಅಬ್ದುಲ್, ಮಹಮ್ಮದ್ ಅಬಿದ್, 623 ಅಂಕ ಗಳಿಸಿದ ಫಾತಿಮಾ ಝೈನಬಾ, ಮಹಮ್ಮದ್, ಫಾತಿಮತ್ ಇರ್ಫಾನ, ಪಿ. ಹಲೀಮತ್, 622 ಅಂಕ ಗಳಿಸಿದ ಮರಿಯಮಿತ್, 621 ಅಂಕ ಗಳಿಸಿದ ಅಲಿಯಾ ಸಯ್ಯದ್ ಹಾಗೂ ಪಿಯುಸಿ. ಪರೀಕ್ಷೆಯ ಕಲಾ ವಿಭಾಗದಲ್ಲಿ 571 ಅಂಕ ಪಡೆದ ಸಾಜಿದಾ ಬಾನು, 569 ಅಂಕ ಪಡೆದ ನಿಯಾಫ ಮರಿಯಮ್, 566 ಅಂಕ ಪಡೆದ ನಿಶಾತ್ ಫಾತಿಮಾ, ವಾಣಿಜ್ಯ ವಿಭಾಗದಲ್ಲಿ 591 ಅಂಕ ಪಡೆದ ಫಾತಿಮಾ ಇನ್ಸಾ, 589 ಅಂಕ ಪಡೆದ ಹಸನ್ ಸಯ್ಯದ್, ವಿಜ್ಞಾನ ವಿಭಾಗದಲ್ಲಿ 589 ಅಂಕ ಪಡೆದ ನಿಯಾಫ್ ಅಹಮದ್, ಫಾತಿಮಾ ಶರೀನ ಇವರುಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.

ಮಂಗಳೂರು ಘಟಕದ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ, ಪ್ರಧಾನ ಕಾರ‍್ಯದರ್ಶಿ ಆಬಿದ್ ಅಸ್ಗರ್ ವರದಿ ಮಂಡಿಸಿದರು. ಅಬ್ದುಲ್ ರವೂಫ್ ಲೆಕ್ಕಪತ್ರ ಮಂಡಿಸಿದರು. ಮಹಮ್ಮದ್ ತುಂಬೆ ವಂದಿಸಿದರು. ಕಾರ‍್ಯದರ್ಶಿ ಅಬ್ದುಲ್ ರಜಾಕ್ ಅನಂತಾಡಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here