ಕಾಂಗ್ರೆಸ್ ರೆಸ್ಕ್ಯೂ ತಂಡದಿಂದ ಪುತ್ತೂರಿನ ವಿವಿಧೆಡೆ ಸ್ವಚ್ಛತಾ ಶ್ರಮದಾನ

0

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಂಗ್ರೆಸ್ ರೆಸ್ಕ್ಯೂ ತಂಡದಿಂದ ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ ಇವರ ವಾರ್ಡ್ ಪ್ರದೇಶಗಳಾದ ಪರ್ಲಡ್ಕ ಮಸೀದಿ ಪರಿಸರ ಹಾಗೂ ಬೀರಮಲೆ ಬೆಟ್ಟಕ್ಕೆ ಹೋಗುವ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಸ್ವಚ್ಛತಾ ಕಾರ್ಯದಲ್ಲಿ ರೆಸ್ಕ್ಯೂಂ ಟೀಂ ತಂಡದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ರಶೀದ್ ಅಮ್ಚಿನಡ್ಕ , ವಿಕ್ಟರ್ ಪಾಯಿಸ್ , ಶರೀಫ್ ಬಲ್ನಾಡ್, ಕೃಷ್ಣಪ್ಪ, ಪ್ರಹ್ಲಾದ್, ಜಯಂತ ನಗರ, ಕೃಷ್ಣಪ್ಪ ನಗರ, ಉನೈಸ್ ಗಡಿಯಾರ ಭಾಗವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಕಾರ್ಮಿಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಯಂಗ್ ಬ್ರಿಗ್ರೇಡ್ ಅಧ್ಯಕ್ಷ ರಂಜಿತ್ ಬಂಗೇರಾ, ಬ್ಲಾಕ್ ಸೇವಾದಳ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಜ್ವಲ್ ರೈ ತೋಟ್ಲ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಬಾತಿಷಾ ಅಳಕೆಮಜಲು, ಅಧ್ಯಕ್ಷ ಚಿರಾಗ್ ರೈ, ಯಂಗ್ ಬ್ರೀಗ್ರೇಡ್ ನ ಸಿನಾನ್ ಪರ್ಲಡ್ಕ ಮುಂತಾದವರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here