ಪುತ್ತೂರು ಬ್ಲಾಕ್ ಕಾಂಗ್ರೆಸ್ ರೆಸ್ಕ್ಯೂ ತಂಡದಿಂದ ಸ್ವಚ್ಛತಾ ಕಾರ್ಯ

0

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಂಗ್ರೆಸ್ ರೆಸ್ಕ್ಯೂ ಟೀಂ ತಂಡದ ವತಿಯಿಂದ   NRCC ಬಳಿಯಿಂದ ಪಾಲಿಂಜೆ ದೇವಸ್ಥಾನದ ತನಕ ಸ್ವಚ್ಛತಾ ಕಾರ್ಯ ನಡೆಯಿತು. ರಸ್ತೆ ಬದಿ ಇರುವ ಗಿಡಗಂಟಿ, ಪೊದರುಗಳನ್ನು ತೆರವುಗೊಳಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರೆಸ್ಕ್ಯೂ ಟೀಂ ಉಸ್ತುವಾರಿ ಪೂರ್ಣೇಶ್ ಭಂಡಾರಿ ನೇತೃತ್ವ ವಹಿಸಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಸ್ವಚ್ಛತಾ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು.

 


ಸ್ವಚ್ಛತಾ ಕಾರ್ಯದಲ್ಲಿ ರೆಸ್ಕ್ಯೂ ತಂಡದ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಿಸ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು, NSUI ಜಿಲ್ಲಾ ಕಾರ್ಯದರ್ಶಿ ಬಾತಿಷಾ ಅಳಕೆಮಜಲು, NSUI ಅಧ್ಯಕ್ಷರಾದ ಚಿರಾಗ್ ರೈ, ಯಂಗ್ ಬ್ರೀಗ್ರೇಡ್ ಕೋಶಾಧಿಕಾರಿ ಶರೀಫ್ ಬಲ್ನಾಡ್, ಬ್ಲಾಕ್ ಸೇವಾದಳ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ, ಘೆಖಖಿಐ ಪದಾಧಿಕಾರಿಗಳಾದ ಎಡ್ವರ್ಡ್ ಡಿ. ಸೋಜಾ, ಸುಹೈಲ್ ಪುತ್ತೂರು, ಸುಹೈಲ್ ಕೂಡುರಸ್ತೆ, ರಮೇಶ್ ತಿಂಗಳಾಡಿ ಹಾಗೂ ಗ್ರಾ.ಪಂ.ಸದಸ್ಯರಾದ ನೇಮಾಕ್ಷ ಸುವರ್ಣ, ಸುಕುಮಾರ ಗೌಡ ಅಮ್ಮುಂಜ, ಪ್ರವೀಣ್ ಗೌಡ ಅಮ್ಮುಂಜ, ಹರೀಶ್ ಮಾದೇರಿ, ಹೊನ್ನಪ್ಪ ನಾಯ್ಕ, ರಿತೇಶ್ ಅಮ್ಮುಂಜ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here