ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತಾ ಸಭೆ – ಸಮಿತಿ ರಚನೆ

0

ಪುತ್ತೂರು: ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದ ವಠಾರದಲ್ಲಿ ಆ.21 ರಂದು ನಡೆಯಲಿರುವ 40 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜು.20 ರಂದು ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರ ಅಧ್ಯಕ್ಷತೆಯಲ್ಲಿ ಶಿವ ಪಾರ್ವತಿ ಮಂದಿರದಲ್ಲಿ ನಡೆಯಿತು.

ಕೊರೋನಾದ ಬಳಿಕ ಮತ್ತೆ ಮೆರುಗು:

ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ ಕಳೆದ ಎರಡು ವರ್ಷದಲ್ಲಿ ಕೋವಿಡ್‌ನಿಂದಾಗಿ ಸಂಭ್ರದ ಆಚರಣೆಗೆ ಅಡ್ಡಿಯಾಗಿತ್ತು. ಹಿಂದಿನ ಸಂಭ್ರಮದ ಆಚರಣೆಗೆ ಮತ್ತೊಮ್ಮೆ ಮೆರುಗು ನೀಡಬೇಕಾಗಿದೆ. ಹಾಗಾಗಿ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಧಾರ್ಮಿಕ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಲಾಗುವುದು ಎಂದು ಹೇಳಿದರಲ್ಲದೆ ಮಂದಿರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗದರ್ಶನದಂತೆ ಧಾರ್ಮಿಕ ಶಿಕ್ಷಣ ನೀಡುವ ಕುರಿತು ಪ್ರಸ್ತಾಪಿಸಿದರು. ಸಭೆಯಲ್ಲಿ ಮಂದಿರದ ಪರಿಸರದವರು ವಿವಿಧ ಸಲಹೆ ಸೂಚನೆ ನೀಡಿದರು.

ಸಮಿತಿ ರಚನೆ:

ಸಂಭ್ರದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ನವೀನ್ ಕುಮಾರ್, ಕಾರ್ಯದರ್ಶಿಯಾಗಿ ಗಣೇಶ್ ಬನ್ನೂರು, ಖಜಾಂಚಿಯಾಗಿ ಶೇಖರ್ ಬಿರ್ವ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರದ ಕೋಶಾಧಿಕಾರಿ ಮೋಹನ್ ಜೈನ್, ಚಂದ್ರಶೇಖರ್, ರಾಧಾಕೃಷ್ಣ ಗೌಡ, ಶೇಖರ್ ಗೌಡ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ, ಯದುಕಲೇಶ್, ಸುರೇಶ್ ಪೂಜಾರಿ, ಪ್ರದೀಪ್, ಕುಶಲ ಗೌಡ, ಮೋಹನ್, ಚಂದ್ರಹಾಸ ಶೆಟ್ಟಿ ಆನೆಮಜಲು, ನಾಗರಾಜ್ ಆಚಾರ್ಯ, ಮನ್‌ದೀಪ್, ಅಶೋಕ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀ ಶಿವಪಾರ್ವತಿ ಮಂದಿರದ ಕಾರ್ಯದರ್ಶಿ ದಯಾನಂದ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here