ಪುತ್ತೂರು : ಯುವವಾಹಿನಿ ಪುತ್ತೂರು ಘಟಕ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ರೋಟರಿ ಜಿ. ಎಲ್ ಸಭಾಭವನದಲ್ಲಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷ ಉಮೇಶ್ ಬಾಯಾರ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ನಾಗೇಶ್ ಬಲ್ನಾಡ್ ಉದ್ಘಾಟಿಸಿದರು. ವೇದಿಕೆಯಲ್ಲಿ ಯುವವಾಹಿನಿ ಪುತ್ತೂರು ಘಟಕದ ಉಪಾಧ್ಯಕ್ಷ ಉಮೇಶ್ ಬಾಯಾರ್, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ್ ಬಲ್ನಾಡ್, ಸಂತೋಷ್ ಶೆಟ್ಟಿ ಎಸ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್ ಪಾಲೇರಿ, ಪ್ಯಾಟ್ರಿಕ್ ಮಸ್ಕರೇನಸ್, ವೈದ್ಯಾಧಿಕಾರಿ ಡಾ|ರಾಮಚಂದ್ರ ಭಟ್ ಕೆ., ಯುವವಾಹಿನಿ ಪುತ್ತೂರು ಘಟಕದ ಕಾರ್ಯದರ್ಶಿ ಜಯರಾಮ್ ಬಿ.ಎನ್, ಸಮಾಜ ಸೇವಾ ನಿರ್ದೇಶಕ ಶಿವಕುಮಾರ್ ಮರಕ್ಕೂರು ಉಪಸ್ಥಿತರಿದ್ದರು. ೨೦ಕ್ಕಿಂತಲೂ ಹೆಚ್ಚು ಬಾರಿ ರಕ್ತದಾನ ಮಾಡಿದ ಘಟಕದ ಮಾಜಿ ಅಧ್ಯಕ್ಷರುಗಳಾದ ಮಹೇಶ್ಚಂದ್ರ ಸಾಲ್ಯಾನ್, ನಾಗೇಶ್ ಬಲ್ನಾಡ್, ಪ್ರಭಾಕರ ಸಾಲ್ಯಾನ್, ಉದಯ ಕೋಲಾಡಿ, ಶಶಿಧರ್ ಕಿನ್ನಿಮಜಲುರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶಿವಕುಮಾರ್ ಮರಕ್ಕೂರು ಸ್ವಾಗತಿಸಿ ಜಯರಾಮ ಬಿ.ಎನ್ ವಂದಿಸಿದರು. ಯುವವಾಹಿನಿ ಪುತ್ತೂರು ಘಟಕದ ಜೊತೆ ಕಾರ್ಯದರ್ಶಿ ಪ್ರಿಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಮುಂಡೂರು ಬಿಲ್ಲವ ಸಮಾಜ ಸೇವಾ ಸಂಘ ಸಹಕರಿಸಿತ್ತು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.