ದ.ಕ.ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಸಾವಯವ ಅಕ್ಷರ ಕೈ ತೋಟ ಯೋಜನೆ-ಡಾ| ಕುಮಾರ್

0

ಸಾವಯವ ಕೈತೋಟ, ಟೆರೇಸ್ ಗಾರ್ಡನ್ ಬಗ್ಗೆ ಪತ್ರಿಕಾ ಭವನದಲ್ಲಿ ತರಬೇತಿ ಶಿಬಿರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸ್ಥಳಾವಕಾಶ ಇರುವ ಎಲ್ಲಾ ಶಾಲೆಗಳಲ್ಲಿ ಸಾವಯವ ಕೃಷಿಯ ಮೂಲಕ ಅಕ್ಷರ ಕೈ ತೋಟ ನಿರ್ಮಿಸುವ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಾವಯವ ಕೃಷಿಕ ಬಳಗ ಮಂಗಳೂರು ಇದರ ಸಹಯೋಗ ದಲ್ಲಿ ಸಾವಯವ ಕೈತೋಟ , ಟೆರೇಸ್ ಗಾರ್ಡನ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆರೋಗ್ಯಕರ ಸಮಾಜ ನಿರ್ಮಾಣದ ಹಿನ್ನಲೆಯಲ್ಲಿ ಸಾವಯವ ಕೈ ತೋಟ ನಿರ್ಮಾಣ, ನಮ್ಮ ಆರೋಗ್ಯ, ಮಣ್ಣಿನ ಆರೋಗ್ಯ ಸೇರಿದಂತೆ ಪರಿಸರ ಸ್ನೇಹಿ ಕಾರ್ಯಕ್ರಮ ಶ್ಲಾಘನೀಯ ಎಂದು ಡಾ.ಕುಮಾರ್ ತಿಳಿಸಿದ್ದಾರೆ.

ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಸಾವಯವ ಕೃಷಿಕರ ಗ್ರಾಹಕರ ಬಳಗದ ಪ್ರಧಾನ ಕಾರ್ಯದರ್ಶಿ ರತ್ನಾಕರ ಮಾತನಾಡುತ್ತಾ, ನಮ್ಮ ಅಡುಗೆ ಮನೆಯನ್ನು ವಿಷಯುಕ್ತ ಪದಾರ್ಥಗಳಿಂದ ಮುಕ್ತ ಗೊಳಿಸಲು ಸಾವಯವ ಕೃಷಿ ಅಗತ್ಯ ಎಂದರು. ಸಣ್ಣ ಬಾಲ್ಕನಿಯಲ್ಲಿ ತರಕಾರಿ, ಹೂವು ಬೆಳೆಯುವುದು ಹೇಗೆ ಎಂಬುದನ್ನು ಈ ಶಿಬಿರದಲ್ಲಿ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಕೈತೋಟ ಕ್ರಾಂತಿ ಎಂಬ ಯೋಜನೆಯಡಿ ತರಬೇತಿ ನೀಡಲಿದ್ದಾರೆ. ನಗರದ ಮನೆಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ಕಾಲಮಾನಗಳ ಹೂವು ಮತ್ತು ತರಕಾರಿಗಳನ್ನು ಬೆಳೆಸುವುದರ ಬಗ್ಗೆ ಈ ಬಳಗ ಜಾಗೃತಿ ಮೂಡಿಸುತ್ತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್. ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಅಧ್ಯಕ್ಷ ಜಿ ಆರ್ ಪ್ರಸಾದ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಹರಿಕೃಷ್ಣ ಕಾಮತ್ ಪುತ್ತೂರು ಸಾವಯವ ಕೈ ತೋಟ ತರಬೇತಿ, ಮಾಹಿತಿ ನೀಡಿದರು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here