ಪ್ರಗತಿ ಸ್ಟಡಿ ಸೆಂಟರ್‌ನಿಂದ ಪ್ರಗತಿ ವಿಜ್ಞಾನ್ “A School of knowledge” NEET (Regular & long term Repeaters Batch) ಪ್ರಾರಂಭ

0

ಪ್ರಗತಿ ವಿಜ್ಞಾನ್ NEET Long term LTB Repeaters batch  ಪ್ರಥಮ ಹಂತದಲ್ಲಿಯೇ NEET  ಪ್ರವೇಶ ಪರೀಕ್ಷೆಯಲ್ಲಿ 720ರಲ್ಲಿ 540 ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಪಡೆದು ಸರಕಾರಿ ಸೀಟುಗಳನ್ನು ಪಡೆಯದ ವಿದ್ಯಾರ್ಥಿಗಳಿಗಾಗಿ ಪ್ರಗತಿ ಸ್ಟಡಿ ಸೆಂಟರ್ ಕೂಡಲೇ ವಸತಿಯುತ ಪ್ರಗತಿ ವಿಜ್ಞಾನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಡಾಕ್ಟರ್ ಆಗಲು ತುಂಬಾ ಉಪಯುಕ್ತವಾಗಿದೆ. ಈ ತರಗತಿಗಳು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯವು ಪ್ರತ್ಯೇಕ ಕಟ್ಟಡದಲ್ಲಿ ಸುಸಜ್ಜಿತವಾದ ಸೌಲಭ್ಯದೊಂದಿಗೆ ಪ್ರಾರಂಭಗೊಳ್ಳಲಿದೆ. ಈ ತರಗತಿಗಳನ್ನು ದಕ್ಷಿಣ ಕನ್ನಡದ ಪರಿಣಿತ ಉಪನ್ಯಾಸಕ ವೃಂದವನ್ನು ಹೊಂದಿರುವ absolute learning academy ಯ ಸಹಯೋಗದೊಂದಿಗೆ ನಡೆಸಲಿದ್ದೇವೆ. ತರಗತಿ ಯು ಮುಂಜಾನೆ 5.30ರಿಂದ ನಡೆಯಲಿದೆ.

 


ಪ್ರಗತಿ ಎಜುಕೇಶನಲ್ ಫೌಂಡೇಶನ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರಿನ ಹೃದಯ ಭಾಗದಲ್ಲಿರುವ ಶ್ರೀ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕಲಿಕೆಯಲ್ಲಿ ಹಿಂದುಳಿದ, ಅನುತೀರ್ಣಗೊಂಡ ಮತ್ತು ಉತ್ತಮ ಅಂಕಗಳನ್ನು ಪಡೆಯಬೇಕೆಂಬ ಹಂಬಲವಿರುವ ವಿದ್ಯಾರ್ಥಿಗಳಿಗೆ ಮೌಲ್ಯಯುಕ್ತವಾದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಹೊಸ ಮಂದಹಾಸ ಎಂಬ ಶಿರೋನಾಮೆಯಲ್ಲಿ ೧೫ ವರ್ಷಗಳಿಂದ ರಾಜ್ಯಾದ್ಯಂತ ಹತ್ತನೇ ತರಗತಿ, ಕಾಲೇಜು ಹಾಗೂ ಪದವಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಕಲಿಕೆಯ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿಯೂ ಶಿಕ್ಷಣದಿಂದ ವಂಚಿತರಾದವರಿಗೆ ಆನ್ಲೈನ್ ಶಿಕ್ಷಣದ ಜೊತೆಗೆ ನೇರ ತರಗತಿಯನ್ನು ನೀಡುವ ಮೂಲಕ ಮಕ್ಕಳ ಉಜ್ವಲವಾದ ಭವಿಷ್ಯಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿ ಮುಗಿಸಿದ ನಂತರ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ನಿವಾರಣೆಗಾಗಿ ಪ್ರಗತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವನ್ನು ಕಲ್ಪಿಸಿದೆ.

ಇವತ್ತಿನ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಡಾಕ್ಟರ್ ಆಗಬೇಕೆಂಬ ಮಹಾದಾಸೆಯನ್ನು ಹೊಂದುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಪ್ರಗತಿಯು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ. ಪ್ರಗತಿ ಸಂಸ್ಥೆಯು NEET ಪ್ರವೇಶ ಪರೀಕ್ಷೆಯ ಮೂಲಕ MBBS/BDS/BMS/BHMS ಸೀಟು ಪಡೆಯುವುದಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಸಲುವಾಗಿ ದೀರ್ಘಕಾಲದ ವಸತಿಯೊಂದಿಗೆ ತರಬೇತಿಯನ್ನು ಆರಂಭಿಸುತ್ತಿದೆ. ಡಾಕ್ಟರ್ ಆಗಲೇ ಬೇಕೆಂದು ನಿರ್ಧರಿಸಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಸಂಸ್ಥೆಯಲ್ಲಿರುವ ಸೌಲಭ್ಯಗಳು

  •  CCTV ಯುಕ್ತ ಅಧ್ಯಯನ ಕೊಠಡಿ ಟಿಉತ್ತಮ ಪುಸ್ತಕ ಸಂಗ್ರಹಾಲಯ ಟಿವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ಹಾಗೂ ಸಮವಸ್ತ್ರ ಟಿಮಧ್ಯಾಹ್ನದ ಭೋಜನದ ವ್ಯವಸ್ಥೆ
  • ಕಂಪ್ಯೂಟರ್ ತರಬೇತಿ ಟಿಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ಸೌಲಭ್ಯ ಟಿಅನುಭವಿ ಹಾಗೂ ಪರಿಣತ ಉಪನ್ಯಾಸಕರಿಂದ ಬೋಧನೆ
  • ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಟಿವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ, ಶೈಕ್ಷಣಿಕ ಪ್ರವಾಸ ಟಿವೈಯಕ್ತಿಕವಾಗಿ ವಿದ್ಯಾರ್ಥಿಗಳ ಕಡೆ ಗಮನ

ಸಂಸ್ಥೆಯಲ್ಲಿ ಲಭ್ಯವಿರುವ ತರಗತಿಗಳು

  • 8 9ನೇ ತರಗತಿಯವರಿಗೆ ನೇರವಾಗಿ ಖಾಸಗಿಯಾಗಿ ಪರೀಕ್ಷೆಯನ್ನು ಬರೆಯಬಹುದು
  • 1  ರಿಂದ ಪದವಿ ತರಗತಿಯವರೆಗೆ ಟ್ಯೂಷನ್ ತರಗತಿಗಳನ್ನು ನೀಡಲಾಗುವುದು ಹತ್ತನೇ ತರಗತಿ ಅನುತ್ತೀರ್ಣಗೊಂಡ ಹಾಗೂ 17  ವರ್ಷ ಪೂರ್ತಿಯಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಅವಕಾಶ.

ನವೋದಯ ಪರೀಕ್ಷೆಯ ತಯಾರಿ, NTSE,NMMS ಅಲ್ಲದೆ ವಿವಿಧ ಇಲಾಖೆಯಲ್ಲಿ ಜರುಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತದೆ
ಜು. ೨೪ರಿಂದ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ CET/NEET ತರಗತಿಗಳು ದಕ್ಷಿಣ ಕನ್ನಡದ ನುರಿತ ಉಪನ್ಯಾಸಕ ವೃಂದವನ್ನು ಹೊಂದಿರುವ absolute learning academy ಸಹಯೋಗದೊಂದಿಗೆ ಪ್ರಾರಂಭಗೊಳ್ಳಲಿದೆ ಜೊತೆಗೆ ಆಸಕ್ತ ವಿದ್ಯಾರ್ಥಿಗಳು/ ಪೋಷಕರು ತಮ್ಮ ಮಕ್ಕಳಿಗೆ ತರಬೇತಿ / ಟ್ಯೂಷನ್ ತರಬೇತಿ ಬೇಕಾದಲ್ಲಿ ಮುಖತಃ ಬಂದು ಸಂಸ್ಥೆ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು

ಸಮಯ: ಬೆಳಗ್ಗೆ 9  ರಿಂದ ಸಂಜೆ 5. ದೂರವಾಣಿ ಸಂಖ್ಯೆ: 9900109490 ಭಾನುವಾರವು ಸಂಸ್ಥೆಯು ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here