ಜು.24: ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ, ಆಟಿ ಐಸಿರಿ, ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಸನ್ಮಾನ

0

ಬಡಗನ್ನೂರುಃ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ, ಬಡಗನ್ನೂರು, ಇದರ ವಾರ್ಷಿಕ ಮಹಾಸಭೆ, ಆಟಿ ಐಸಿರಿ, ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಹಾಗೂ ಸನ್ಮಾನ ಕಾರ್ಯಕ್ರಮ ಜು.24 ರಂದು ಪೂರ್ವಾಹ್ನ 9-30ಕ್ಕೆ ಪಟ್ಟೆ ಶ್ರೀನಿಲಯದಲ್ಲಿ ನಡೆಯಲಿದೆ.

ನಿವೃತ್ತ ಪೊಲೀಸ್ ಉಪನಿರೀಕ್ಷಕ ಹಾಗೂ ಮತ್ತೂರು ಲ್ಯಾಂಪ್ಸ್ ನಿರ್ದೇಶಕ ಪಿ. ಎಂ. ಕೃಷ್ಣ ನಾಯ್ಕ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಪಡುಮಲೆ ಮರಾಟಿ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಮುಂಡೋಳೆರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮತ್ತೂರು ಕೊಂಬೆಟ್ಟು ಮ.ಸ.ಸೇ, ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ, ಮತ್ತೂರು ಶ್ರೀಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ. ಶೀನ ನಾಯ್ಕ, ಮತ್ತೂರು ಕೊಂಬೆಟ್ಟು ಮ.ಸ.ಸೇ, ಸಂಘದ ಕಾರ್ಯದರ್ಶಿ ಸಾವಿತ್ರಿ ಎಸ್, ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಪುತ್ತೂರು, ಕೊಂಬೆಟ್ಟು ಮರಾಟಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಗೌರಿ ಭಾಗವಹಿಸಲಿದ್ದಾರೆ.

ಸ್ವಜಾತಿ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪಡುಮಲೆ ಮರಾಟಿ ಸೇವಾ ಸಂಘದ ಗೌರವ ಅಧ್ಯಕ್ಷ ವೈ.ಕೆ. ನಾಯ್ಕ ಪಟ್ಟೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here