ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಮಟ್ಟದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮ

0

ಪುತ್ತೂರು: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸಂಸ್ಕಾರ ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಉತ್ತಮ ಪ್ರಜೆಯೂ ಒಳ್ಳೆಯ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖ ಪಾಣಾಜೆ ಹೇಳಿದರು.

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ  ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು, ದ. ಕ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕ ಮತ್ತು ರೇಡಿಯೋ ಪಾಂಚಜನ್ಯ 90.8FM ನೆಹರೂ ನಗರ ವತಿಯಿಂದ ನಡೆದ ತಾಲೂಕು ಮಟ್ಟದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು ಮತ್ತು ದೇಶಪ್ರೇಮದ ಪ್ರಜ್ಞೆಯನ್ನು ಮೂಡಿಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ನುಡಿದರು.

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸುಧಾಕರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ವೀರರು ಹುತಾತ್ಮರಾದರು ಅವರ ಬಲಿದಾನ ಸಾರ್ಥಕತೆ ಆಗಬೇಕಾದರೆ ನಮ್ಮ ದೇಶಕ್ಕೆ ಗೌರವ ನೀಡಿದವರ ಹೆಸರನ್ನು ಉಳಿಸಿಕೊಳ್ಳಬೇಕು ಎಂದರು. ದ. ಕ ಜಿಲ್ಲಾ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕ ನುಡಿಯನ್ನು ಹೇಳಿದರು. ಬಿ. ಎಡ್ ವಿದ್ಯಾರ್ಥಿಗಳ ಕೈಚಳಕದಲ್ಲಿ ಮೂಡಿಬಂದ ಪುಸ್ತಕ ವಿಮರ್ಶೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆಯ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ ಶೋಭಿತ ಸತೀಶ್ ಸ್ವಾಗತಿಸಿದರು. ರೇಡಿಯೋ ಪಾಂಚಜನ್ಯ 90.8FMಯ ಅಧ್ಯಕ್ಷರು ಕೃಷ್ಣವೇಣಿ ಪ್ರಸಾದ್ ಮುಳಿಯ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ಅನುಷಾ, ಶ್ರೀಹಿತ, ಜೀವಿತ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಜೇತರಾದವರ ವಿವರ:

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಹಾಗೂ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ವಿವರ ಇಂತಿದೆ.

ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪಿಯುಸಿ ವಿಭಾಗದಲ್ಲಿ ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ ಶರ್ಮಾ(ಪ್ರ), ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ಪ್ರಭು(ದ್ವಿ), ತೆಂಕಿಲ ನರೇಂದ್ರ ಪಿ.ಯುಸಿ ವಿದ್ಯಾರ್ಥಿನಿ ಶಮಾ ಕೆ.ಜೆ.(ತೃ) ಮತ್ತು ನರೇಂದ್ರ ಪಿಯುಸಿ ವಿದ್ಯಾರ್ಥಿನಿ ಆಕಾಂಕ್ಷಾ (ಪ್ರೋತ್ಸಾಹಕ).

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ನೆಹರೂನಗರ ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿನಿ ಸ್ವಾತಿ ಎಂ.(ಪ್ರ), ದರ್ಬೆ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಲಹರಿ ಎಚ್. ಆಚಾರ್ಯ(ದ್ವಿ), ದರ್ಬೆ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಅಪೂರ್ವ ಜಿ., (ತೃ)., ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿನಿ ಕೀರ್ತಿ ಕುಡ್ವ(ಪ್ರೋತ್ಸಾಹಕ).

ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಾಯತ್ರಿ (ಪ್ರ), ನೆಹರೂನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಶ್ರೀಮಾನಸ(ದ್ವಿ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಚರಣ್ ಎ.(ತೃ), ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೈತ್ರಿ ಮತ್ತು ಎಚ್.ಪಿ.ಆರ್. ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿನಿ ಧನ್ಯಾ ಎ.(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಸಾರ್ವಜನಿಕ ವಿಭಾಗದಲ್ಲಿ ಸಾನ್ವಿ ಕಜೆ(ಪ್ರ), ಶ್ರೀಮತಿ ಪೂಜಾ ಭಾವನಾ ಪ್ರಭು(ದ್ವಿ), ಲಿಖಿತಾ (ತೃ) ಮತ್ತು ಶ್ರೀಮತಿ ನಮಿತಾ ಕೆ.ಕೆ.(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿಭಾಗದಲ್ಲಿ ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ಅವನಿ ಕೆ.(ಪ್ರ), ವಿವೇಕಾನಂದ ಪಿಯುಸಿ ವಿದ್ಯಾರ್ಥಿನಿ ಸುಶ್ಮಿತಾ ಬಿ.ಆರ್.(ದ್ವಿ), ಕೆ.ಪಿ.ಎಸ್.ಇ ಕಾಲೇಜು ಕುಂಬ್ರ ಇಲ್ಲಿನ ವಿದ್ಯಾರ್ಥಿನಿ ಆಯಿಷತ್ ಮಝೀನಾ(ತೃ), ಕುಂಬ್ರ ಕೆ.ಪಿ.ಎಸ್.ಸಿ ಇಲ್ಲಿನ ವಿದ್ಯಾರ್ಥಿನಿ ಖದೀಝತ್ ಸಫ್ರೀನಾ(ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ(ಪ್ರ), ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ(ದ್ವಿ), ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಚೈತ್ರ(ತೃ), ಸವಣೂರು ವಿದ್ಯಾರಶ್ಮಿ ಕಾಲೇಜು ವಿದ್ಯಾರ್ಥಿನಿ ಅನನ್ಯ ವಿ.ವಿ.(ಪ್ರೋತ್ಸಾಹಕ) ಬಹುಮಾನ ಪಡೆದುಕೊಂಡಿರುತ್ತಾರೆ.

ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸೂರ್ಯ ಪಿ.(ಪ್ರ), ನೆಲ್ಲಿಕಟ್ಟೆ ಎಚ್.ಪಿ.ಆರ್ ಕಾಲೇಜು ವಿದ್ಯಾರ್ಥಿನಿ ವಿದ್ಯಾಶ್ರೀ(ದ್ವಿ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಪಿ.ಎಸ್.(ತೃ) ಮತ್ತು ಎಚ್.ಪಿ.ಆರ್. ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿ ಪಿ. ಮುಝಮಿಲ್(ಪ್ರೋತ್ಸಾಹಕ) ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here