ಉಪ್ಪಿನಂಗಡಿ: ಭತ್ತ ಬೇಸಾಯ ಮತ್ತು ಯಂತ್ರಶ್ರೀಯ ಪ್ರಾತ್ಯಕ್ಷಿಕೆ

0

ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್‌ನ ಶ್ರೀ ರಾಮ ಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನ ಸಹಯೋಗದಲ್ಲಿ ಭತ್ತ ಬೇಸಾಯ ಮತ್ತು ಯಂತ್ರಶ್ರೀಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರ ಲಕ್ಷ್ಮೀನಗರದ ಮುಳಿಯ ಕುಟುಂಬಸ್ಥರ ಗದ್ದೆಯಲ್ಲಿ ನಡೆಯಿತು.

ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಅಧ್ಯಕ್ಷ ಕರುಣಾಕರ ಸುವರ್ಣ, ನಿವೃತ ಯೋಧ ಚಂದಪ್ಪ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಿಭಾಗದ ಯೋಜನಾಧಿಕಾರಿ ಉಮೇಶ್ ಪೂಜಾರಿ ಭತ್ತ ಬೇಸಾಯ ಮತ್ತು ಯಂತ್ರಶ್ರೀ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಪ್ರಧಾನ ಕಾರ್ಯದರ್ಶಿಗಳಾದ ಯಶೋಧಾ ಕೆ. ಗೌಡ, ನಾಗವೇಣಿ, ಸದಸ್ಯರಾದ ರೇವತಿ, ಪ್ರೇಮಲತಾ ಬಲ್ನಾಡು, ಭಾರತಿ, ಮಲ್ಲಿಕಾ ರೈ, ಮುಳಿಯ ಕುಟುಂಬದ ಬೇಬಿ ಹೆಗ್ಡೆ, ಕಲಾವತಿ ಹೆಗ್ಡೆ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ. ರಾಧಾ, ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಯಂತ್ರಶ್ರೀಯ ಕೃಷ್ಣ ಸಿ., ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ, ಸೇವಾ ಪ್ರತಿನಿಧಿ ಉಷಾ, ಪ್ರಮುಖರಾದ ವಿಶ್ವನಾಥ ಶೆಟ್ಟಿ ಕಂಗ್ವೆ, ಉದಯ ಅತ್ರೆಮಜಲು, ಹರೀಶ್ಚಂದ್ರ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.

ಯಂತ್ರದ ಮೂಲಕ ನೇಜಿ ನಾಟಿ ಮಾಡುವ ಪ್ರಾತಕ್ಷಿಕೆಯನ್ನು ಶ್ರೀ ರಾಮ ಶಾಲೆ ಹಾಗೂ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಸಂದರ್ಭ ಶ್ರೀ ಮಾಧವ ಶಿಶು ಮಂದಿರದ ಸಹಾಯಕ ಮಾತಾಜಿ ಚಂದ್ರಾವತಿ ಓಬೇಲೆ ಹಾಡುಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ರಾಮ ಪ್ರೌಢಶಾಲೆಯ ಮುಖ್ಯಗುರು ರಘುರಾಮ ಭಟ್ ಸ್ವಾಗತಿಸಿದರು. ವಿಮಲಾ ಮಾತಾಜಿ ವಂದಿಸಿದರು. ಶಿಕ್ಷಕ ಕಿರಣ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here