ಸಾಮೆತ್ತಡ್ಕ ಶಾಲೆಯಲ್ಲಿ ‘ಶಾಲೆಯೊಂದಿಗೆ ವನ’ ಕಾರ್ಯಕ್ರಮ – ವಿದ್ಯಾರ್ಥಿಗಳಿಂದಲೇ ಗಿಡ ನೆಟ್ಟು ಪೋಷಣೆ

0

ಪುತ್ತೂರು: ಸಾಮೆತ್ತಡ್ಕ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ‘ಶಾಲೆಯೊಂದಿಗೆ ವನ’ ಎಂಬ ವಿನೂತನಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಗಿಡ ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮ ಜು.23ರಂದು ನಡೆಯಿತು.

ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಅವರು ಶಾಲೆಯೊಂದಿಗೆ ವನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ “ನಮ್ಮ ಶಾಲೆ ಸಾಮೆತಡ್ಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪಂಚಾಕ್ಷರಿ, ಸಿಝ್ಲರ್ ಮಾಲಕರು ಹಾಗೂ ಟ್ರಸ್ಟ್ ಪ್ರತಿನಿಧಿಯಾಗಿರುವ ಪ್ರಸನ್ನ ಕುಮಾರ್ ಶೆಟ್ಟಿ, ನೂತನ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾಗಿರುವ ದಿನೇಶ್ ಕಾಮತ್, ಟ್ರಸ್ಟ್ ಕಾರ್ಯದರ್ಶಿ ಹಾಗೂ ಯುವಕ ಮಂಡಲದ ಪ್ರತಿನಿಧಿ ಇಂದಿವರ್ ಭಟ್, ಹಿರಿಯ ವಿದ್ಯಾರ್ಥಿ ಫಾಯ್ ಜ್, ಶಾಲಾ ಹಿರಿಯ ವಿದ್ಯಾರ್ಥಿ ಕುಮಾರ್, ಯುವಕ ಮಂಡಲದ ಪ್ರತಿನಿಧಿ ಸಿರಾಜ್, ಅಖಿಲ್, ಸಮರ್ಥ್, ಅನೀಲ್ ಹಾಗೂ ಮುಖ್ಯ ಗುರುಗಳಾದ ಮೀನಕುಮಾರಿ ಕೆ, ಶಿಕ್ಷಕರಾದ ವೇದಾವತಿ, ಲಿಖಿತ, ವೀಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಮರಿಯಾ ಎಂ. ಎ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here