ಪರ್ಲಡ್ಕ ಶಾಲೆಯಲ್ಲಿ ಉಚಿತ ಕೋವಿಡ್ ಬೂಸ್ಟರ್ ಡೋಸ್ ಶಿಬಿರ

0

  • ಪ್ರತಿ ವಾರ್ಡ್‌ಗಳಲ್ಲೂ ಲಸಿಕಾ ಶಿಬಿರ ನಡೆಸುವ ಚಿಂತನೆ – ಕೆ.ಜೀವಂಧರ್ ಜೈನ್

ಪುತ್ತೂರು: ಆಜಾದಿ ಕೀ ಅಮೃತ್ ಮಹೋತ್ಸವ್ ಪ್ರಯುಕ್ತ ಉಚಿತ ಕೋವಿಡ್ ವ್ಯಾಕ್ಸಿನೇಷನ್(ಬೂಸ್ಟರ್ ಡೋಸ್) ಶಿಬಿರವು ಜು. 23ರಮದು ಪರ್ಲಡ್ಕ ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.

 


ನಗರಸಭಾಧ್ಯಕ್ಷ ಕೆ ಜೀವಂಧರ್ ಜೈನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಇಡೀ ವಿಶ್ವಕ್ಕೇ ಮಾದರಿಯಾದ ನಮ್ಮ ಪ್ರಧಾನಿ ನರೇಂದ್ರ ಮೋದೀಜೀಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಮೊದಲ ಹಾಗೂ ಎರಡನೇ ಕೊರೋನಾ ವ್ಯಾಕ್ಸಿನ್ ಕಾರ್ಯಕ್ರಮ, ಇದೀಗ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆ ಕೂಡಾ ದೇಶದಾದ್ಯಂತ ನಡೆಯುತ್ತಿದೆ. ನಮ್ಮೂರು ಕೂಡಾ ಕೊರೋನಾ ಮುಕ್ತವಾಗಲು ಎಲ್ಲ ನಾಗರಿಕರನ್ನು ತಲುಪಲು ಸುಲಭ ಸಾಧ್ಯವಾಗುವಂತೆ ಪ್ರತಿ ವಾರ್ಡ್’ಗಳಲ್ಲಿಯೂ ಈ ರೀತಿಯ ಲಸಿಕಾ ಶಿಬಿರ ಆಯೋಜಿಸುವ ಚಿಂತನೆ ಇದೆ ಎಂದರು.

ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ ಪ್ರಾಸ್ತಾವಿಕ ಮಾತಾಡಿ, ವಾರ್ಡ್-19’ರ ಸುತ್ತಮುತ್ತಲಿನ ಸ್ಥಳೀಯರಿಗೆ ಅನುಕೂಲವಾಗುವಂತೆ ಪರ್ಲಡ್ಕ ಶಾಲೆಯಲ್ಲಿ ಲಸಿಕಾ ಶಿಬಿರ ಏರ್ಪಡಿಸಲಾಗಿದೆ ಎಂದರು. ಡಾ.ಸುಶ್ಮಿತಾ ಪೈ, ಸುಶ್ರೂಕಿಯರಾದ ಸಿಸ್ಟರ್ ತ್ರಿವೇಣಿ, ಮೀನಾಕ್ಷಿ ಹಾಗೂ ಆಶಾ ಕಾರ್ಯಕರ್ತೆ ವೀಣಾ ಚಿದಾನಂದ್ ಆಚಾರ್ಯ ಶಿಬಿರದಲ್ಲಿ ಸಹಕರಿಸಿದರು. ಪ್ರಮುಖರಾದ ಶಿವಕುಮಾರ್ ಕಲ್ಲಿಮಾರ್, ಪುರುಷೋತ್ತಮ್ ನಾಕ್, ರವಿರಾಜ್, ಸತೀಶ್, ವಿಕ್ರಮ್ ಪರ್ಲಡ್ಕ ಉಪಸ್ಥಿತರಿದ್ದರು. ವಿದ್ಯಾಗೌರಿ ಸ್ವಾಗತಿಸಿ, ಶಾಲಾ ಮುಖ್ಯಗುರು ವತ್ಸಲಾ ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡರು.

LEAVE A REPLY

Please enter your comment!
Please enter your name here