- ಆಟೋ ರಿಕ್ಷಾ ಚಾಲಕನಿಗೆ ದಂಡ ವಿಧಿಸಿದ ಪೊಲೀಸರು
ಪುತ್ತೂರು: ನಿಯಮಕ್ಕಿಂತ ಹೆಚ್ಚು ಪ್ರಯಾಣಿಕರಾದ ವಿದ್ಯಾರ್ಥಿಗಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಕಾನೂನು ಉಲ್ಲಂಘನೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಕುರಿತು ಪೊಲೀಸರಿಗೆ ಬಂದಿರುವ ಸಾರ್ವಜನಿಕ ದೂರಿಗೆ ಸಂಬಂಧಿಸಿ ಕಾನೂನು ಉಲ್ಲಂಘಿಸಿದ ಆಟೋ ರಿಕ್ಷಾ ಚಾಲಕನಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
ಜು. 18ರಂದು ಪುತ್ತೂರಿನಿಂದ ಕೊಡಿಪ್ಪಾಡಿ ಕಡೆ ಹೋಗುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಸಂಚಾರ ನಿಯಮಕ್ಕಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಚಾರವಾಗಿ ಸಾರ್ವಜನಿಕರಿಂದ ಬಂದ ದೂರಿನಂತೆ ಮಾಹಿತಿ ಪಡೆದ ಪುತ್ತೂರು ಸಂಚಾರ ಪೊಲೀಸರು ಕಾನೂನು ನಿಯಮ ಉಲ್ಲಂಘನೆ ಮಾಡಿದ ಆಟೋ ರಿಕ್ಷಾ ಚಾಲಕನಿಗೆ ದಂಡ ವಿಧಿಸಿದ್ದಾರೆ.
Sir k s r t c full nelondu Poper ain yer la kenujjera rule auto mathra Na bus g ijja