ಶ್ರೀ ಸರಸ್ವತಿ ಮಹಿಳಾ ಸಂಘದ ಆಶ್ರಯದಲ್ಲಿ ಆಷಾಡಾನ್ತ್ ಏಕ್ ದೀಸ್

0

  • ಆಷಾಡದಲ್ಲಿ ಒಂದು ದಿನ ಮಾಹಿತಿ ಮತ್ತು ಖಾಧ್ಯಗಳ ಪ್ರದರ್ಶನ‌

 

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಅಂಗವಾಗಿ ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ಆಷಾಡಾನ್ತ್ ಏಕ್ ದೀಸ್ (ಆಷಾಡದಲ್ಲಿ ಒಂದು ದಿನ) ಕಾರ್ಯಕ್ರಮ ದರ್ಬೆ ಸಚ್ಚಿದಾನಂದ ಸೇವಾ ಸದನದ ಸಭಾಭವನದಲ್ಲಿ ಜರಗಿತು.


ಆಷಾಡದಲ್ಲಿ ಮನೆಮನೆಗಳಲ್ಲಿ ತಯಾರಿಸಿ ಸಂಭ್ರಮಿಸುತ್ತಿದ್ದ ಖಾಧ್ಯಗಳ ಪ್ರದರ್ಶನ ಮತ್ತು ಆಷಾಡದ ವಿಶೇಷತೆಗಳ ಮಾಹಿತಿ‌ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಗಳಾಗಿದ್ದ ಜಲಜಾಕ್ಷಿ ಪ್ರಭು ಆಷಾಡ ಮಾಸದ ವಿಶೇಷತೆ ಮತ್ತು ಆಷಾಡದಲ್ಲಿ ಬಳಸುವ ಖಾಧ್ಯಗಳಲ್ಲಿ ಇರುವ ಔಷದೀಯ ಗುಣಗಳ ಮಾಹಿತಿ ನೀಡಿದರು‌.

ನುಗ್ಗೆ ಸೊಪ್ಪು ಪಲ್ಯ ,ಪತ್ರೊಡೆ ,ಹಲಸಿನ‌ಗಟ್ಟಿ ,ಕೆಸುವಿನ‌ಸೊಪ್ಪಿನ ಚಟ್ನಿ ,ಹಲಸಿನ ಬೀಜದ ಚಟ್ನಿ ,ಹಲಸಿನ‌ ಮಾಂಬಲ ,ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಖಾಧ್ಯಗಳ ಪ್ರದರ್ಶನ ನಡೆಯಿತು.

ಸಂಘದ ಅಧ್ಯಕ್ಷ ಶುಭಾಕರ ರಾವ್ ಅಧ್ಯಕ್ಷತೆ ವಹಿಸಿದ್ದರು .ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಜಯಂತಿ ನಾರಾಯಣ ನಾಯಕ್ ಪುಂಡಿಕಾಯಿ ,ಮಹಿಳಾ ಮಂಡಳಿ‌ ಅಧ್ಯಕ್ಷೆ ರಂಜಿತಾ ಪ್ರಭು ಉಪಸ್ಥಿತರಿದ್ದರು . ಸಿಂಧುನಾರಾಯಣ ನಾಯಕ್ ವಂದಿಸಿ ,ಮಲ್ಲಿಕಾ ಕುಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here