ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆ ಉದ್ಘಾಟನೆ

0

ನೆಲ್ಯಾಡಿ: ಸಂತಜಾರ್ಜ್ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2022-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಜು.21ದು ನಡೆಯಿತು.


ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಉದ್ಘಾಟಿಸಿ ಮಾತನಾಡಿ, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಮುಂತಾದ ಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮಾಡುವುದರೊಂದಿಗೆ ಸಮಾಜ ಸೇವೆಯಂತಹ ಉದಾತ್ತ ಮೌಲ್ಯವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವ ತರಬೇತಿ, ಸೇವಾ ಮನೋಭಾವನೆ ಮಿತ್ರತ್ವ ಭ್ರಾತೃತ್ವ ಸಹಜೀವನ ಮುಂತಾದ ಜೀವನ ಮೌಲ್ಯಗಳ ಅನುಭವ ಆಗಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ಮಾತನಾಡಿ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಪ್ರಮುಖವಾದ ಸಂಘ ಆಗಿದೆ. ಬೇರೆ ಬೇರೆ ಡಿಗ್ರಿಗಳನ್ನು ಪಡೆದುಕೊಂಡವರೆಲ್ಲ ವಿದ್ಯಾವಂತರಲ್ಲ, ನಾವು ಇನ್ನೊಬ್ಬರಿಗೆ ಮಾಡುವ ಸೇವೆಯೇ ನಿಜವಾದ ವಿದ್ಯೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕ ಹಾಗೂ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ.,ರವರು ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮಾಧಿಕಾರಿ ವಿಶ್ವನಾಥ ಶೆಟ್ಟಿ ಕೆ., ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಘಟಕದ ನಾಯಕಿ ಶ್ರೇಯ ಎಂ.ಇ., ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಎನ್‌ಎಸ್‌ಎಸ್ ನೇತ್ರಾವತಿ ತಂಡದ ನಾಯಕ ಮೆಲ್ವಿನ್, ಕಾವೇರಿ ತಂಡದ ನಾಯಕ ಜಿತು, ಶರಾವತಿ ತಂಡದ ನಾಯಕಿ ಚೈತನ್ಯ, ಕುಮಾರಧಾರ ತಂಡದ ನಾಯಕಿ ಫಾತಿಮಾತ್ ರಿಝನರವರು ಹೂಗುಚ್ಛ ನೀಡಿ ಗೌರವಿಸಿದರು. ವರ್ಷಿತಾ ಮತ್ತು ತಂಡದವರು ಎನ್‌ಎಸ್‌ಎಸ್ ಧ್ಯೇಯಗೀತೆ ಹಾಡಿದರು. ಉಪನ್ಯಾಸಕ ಮಧು ಎ.ಜೆ., ಜೆಸಿಂತಾ ಕೆ.ಜೆ., ಗೀತಾ ಪಿ.ಬಿ., ಶಾರದಾ ಬಿ.ಸಿ., ಉಪಸ್ಥಿತರಿದ್ದರು. ಎನ್.ಎಸ್.ಎಸ್ ಸ್ವಯಂಸೇವಕಿ ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಲಿಖಿತ್ ವಂದಿಸಿದರು.

LEAVE A REPLY

Please enter your comment!
Please enter your name here