ಕಾವು: ಅರೋಗ್ಯವಂತ ಸಮಾಜಕ್ಕಾಗಿ ಆರೋಗ್ಯವಂತ ಯುವಜನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲದ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಾವು ನನ್ಯಪಟ್ಟಾಜೆಯಲ್ಲಿ ವಾಸಿಸುತ್ತಿರುವ ಕೆಲಸ ಮಾಡಲು ಆಶಕ್ತರಾಗಿರುವ ಮುದರ ಹಾಗೂ ಇವರ ಸಹೋದರಿ ಚೋಮರವರು ವಾಸಿಸುತ್ತಿರುವ ಮನೆಗೆ ದಾರಂದ ಹಾಗೂ ಬಾಗಿಲು ನ್ನು ಜೋಡಿಸಿ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ನವೀನ್ ನನ್ಯಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು,ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ್ ಕಾವು,ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ,ಚಂದ್ರಶೇಖರ ಬಲ್ಯಾಯ,ಗಂಗಾಧರ ನಾಯ್ಕ,ಸದಸ್ಯರಾದ ಸಂಕಪ್ಪ ಪೂಜಾರಿ, ರಾಜೇಶ್ ಕಾವು, ಶ್ರೀಕುಮಾರ್ ಬಲ್ಯಾಯ, ದಿವ್ಯಪ್ರಸಾದ್ ಎ ಯಂ, ಸತೀಶ್ ಮದ್ಲ, ಹಾಗೂ ಯುವಕ ಮಂಡಲದ ಹಿತೈಷಿಗಳಾದ ನಾರಾಯಣ ಮೂಲ್ಯ ನನ್ಯಪಟ್ಟಾಜೆ ಉಪಸ್ಥಿತರಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.