ವಿಟ್ಲ: ಆಲ್ಟೋ ಕಾರಿನಲ್ಲಿ ಜಾನುವಾರು ಸಾಗಾಟ ಪ್ರಕರಣ – ಇಬ್ಬರ ಬಂಧನ

0

ವಿಟ್ಲ: ಆಲ್ಟೋ ಕಾರೊಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಳ್ನಾಡು ಗ್ರಾಮದ ಪಂಜರ ಕೋಡಿ ನಿವಾಸಿಗಳಾದ ಅದ್ರಾಮ ರವರ ಪುತ್ರ ಬಶೀರ್ (28 ವ.) ಹಾಗೂ ಇಬ್ರಾಹಿಂರವರ ಪುತ್ರ ನೌಫಾಲ್ (24 ವ.)ಬಂಧಿತ ಆರೋಪಿಗಳಾಗಿದ್ದಾರೆ. ಕೇಪು ಗ್ರಾಮದ ಬೀಜಂತಡ್ಕ ಎಂಬಲ್ಲಿಂದಾಗಿ ಆಕ್ರಮವಾಗಿ ಆಲ್ಟೋ ಕಾರೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಎರಡು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆ ವಾಹನವನ್ನು ತಡೆದು ನಿಲ್ಲಿಸಿದಾಗ ಕಾರು ಚಾಲಕ, ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆಲ್ಟೋ ಕಾರಿನ ಸಹಿತ ಎರಡು ಜಾನುವಾರನ್ನು ತಮ್ಮ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಸಾರಡ್ಕ ನಿವಾಸಿ ಅಚ್ಚುತ ಮಣಿಯಾಣಿಯವರ ಪುತ್ರ ರಾಘವ ಮಣಿಯಾಣಿಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪರಾರಿಯಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here