ಸುಪ್ರೀಂ ಕೋರ್ಟ್‌ನ ಯುವ ವಕೀಲ ಹಿರೇಬಂಡಾಡಿಯ ಅಬ್ದುಲ್‌ರಹಿಮಾನ್ ರವರಿಗೆ ಗೌರವ ಡಾಕ್ಟರೇಟ್ ಪದವಿ

0

 

 

ಪುತ್ತೂರು: ಸುಪ್ರೀಂಕೋರ್ಟ್ ವಕೀಲರಾಗಿ ವಿಶೇಷ ಸೇವೆಗೈದ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಯುವ ವಕೀಲ ಅಬ್ದುಲ್ ರಹಿಮಾನ್ ರವರಿಗೆ ರೆಜೆನ್ಸಿ ಇಂಟರ್ ನ್ಯಾಷನಲ್ ತಿಯಲಾಜಿಕಲ್ ಸ್ಕೂಲ್ ಆಫ್ ಮಿಷನ್ ಯುನಿವರ್ಸಿಟಿ ಒಂಟಾರಿಯೋ ಕೆನಡಾ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.

ದೇಶದ ಹಿಂದುಳಿದ ವರ್ಗದ,ಅಲ್ಪಸಂಖ್ಯಾತರ,ದಲಿತರ ಪ್ರಕರಣಗಳಲ್ಲಿ ಹಲವಾರು ನೊಂದವರ ಪರ ವಕಾಲತ್ತು ವಹಿಸುವ ಮೂಲಕ ನ್ಯಾಯ ಒದಗಿಸಿದ್ದರು.
ಇವರು ಹಿರೆಬಂಡಾಡಿಯ ಕೃಷಿಕರಾದ ದಿ.ಯೂಸುಫ್ ಮತ್ತು ಆಮಿನಮ್ಮ ದಂಪತಿಯ ಪುತ್ರರಾಗಿದ್ದಾರೆ, ಪುತ್ತೂರು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿ ಕಳೆದ ನಾಲ್ಕು ವರ್ಷಗಳಿಂದ ಸುಪ್ರಿಂ ಕೋರ್ಟ್ ನಲ್ಲಿ ವಕೀಲರಾಗಿ ಸೇವೆಗೈಯುತ್ತಿದ್ದಾರೆ,  ಜು.24  ರಂದು ಗೋವದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here