ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 36 ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

0

  • ಅನುಭವಕ್ಕಿಂತ ಮಿಗಿಲಾದ ವಿಧ್ಯೆ ಬೇರೊಂದಿಲ್ಲ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ವಿಟ್ಲ: ಬುದ್ಧಿ ಜೀವಿಗಳಿಂದಲೇ ದೇಶಕ್ಕೆ ಆಪತ್ತಿರುವುದು ಆತಂಕದ ವಿಚಾರ. ಅನುಭವಕ್ಕಿಂತ ಮಿಗಿಲಾದ ವಿಧ್ಯೆ ಬೇರೊಂದಿಲ್ಲ. ನಿತ್ಯಾನಂದರ ಜೀವನಾದರ್ಶ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ. ಸಂಪತ್ತು, ಜ್ಞಾನ ಬಂದಕೂಡಲೇ ನಮ್ಮಲ್ಲಿ‌ ಬದಲಾವಣೆ ಉಂಟಾಗುತ್ತದೆ. ಗುರುಗಳ ಶಕ್ತಿಯ ಮುಂದೆ ನಾವು ಪಾತ್ರದಾರಿಗಳು ಮಾತ್ರ. ಭಕ್ತಿಮಾರ್ಗ ಮತ್ತು ಗುರುನಾಮ ಸ್ಮರಣೆ ಜೀವನದಲ್ಲಿ ಅತೀ ಮುಖ್ಯ. ಸಂಸ್ಕಾರ ಸಂಸ್ಕೃತಿಯಿಲ್ಲದ ಬದುಕು ಮೌಲ್ಯರಹಿತ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.5ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ 36ನೇ ದಿನವಾದ ಜು.24ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಸ್ವಾರ್ಥ ತ್ಯಾಗಿಗಳ ಪಾತ್ರ ಅಪಾರ. ಆಚಾರ ವಿಚಾರದ ವ್ಯತ್ಯಾಸದಿಂದ ನಿಸರ್ಗ ಮುನಿಯುತ್ತಿದೆ. ಈಗಿನ ಕಾಲಘಟ್ಟದಲ್ಲಿ ಸ್ವಾರ್ಥ ಹೆಚ್ಚಿ ಹಿರಿಯರ‌ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಭಾರತ ಕರ್ಮಭೂಮಿ. ಸನಾತನ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ನಾನು ನನ್ನದೆಂಬುದನ್ನು ತೊರೆದು ನಾವು ನಮ್ಮದೆಂದು ಬಾಳಿ. ದೇಶ ಉಳಿಯುವುದಿದ್ದರೆ ಭಜನೆ, ಯಾಗ, ಗುರುಭಕ್ತಿಯಿಂದ ಮಾತ್ರ. ಭಾವನಾತ್ಮಕವಾಗಿ ನಮ್ಮವರೆಂಬ ಭಾವನೆ ನಮ್ಮಲ್ಲಿ ಬರಬೇಕು. ದೇಶದ ಶಕ್ತಿ ಆಧ್ಯಾತ್ಮ, ನಮ್ಮ ತನ ಉಳಿದರೆ ದೇಶ ಉಳಿಯಲು ಸಾಧ್ಯ. ಮಕ್ಕಳು‌ ದೇಶದ ಪ್ರಭುದ್ದ‌ ಸಂಪತ್ತು. ಮಕ್ಕಳಿಗೆ ಸಂಪತ್ತು ಮಾಡಿಡುವ ಬದಲು ಅವರನ್ನೇ ಸಂಪತ್ತಾಗಿಸುವ ಪ್ರಯತ್ನ ನಿಮ್ಮದಾಗಲಿ. ಈ ಬಾಲಬೋಜನಕ್ಕೆ ಮೂರು ಮಹಾತ್ಮರ ಶಕ್ತಿಯಿದೆ. ಜಾತಿ ಕಟ್ಟುವ ಬದಲು ನೀತಿಕಟ್ಟುವ ಮನಸ್ಸು ನಿಮ್ಮದಾಗಲಿ. ಆಚರಣೆಯನ್ನು‌ ಸರಿಯಾಗಿ ಬಳಸಿಕೊಳ್ಳಿ. ನಮ್ಮಲ್ಲಿರುವ ದೌರ್ಭಲ್ಯವನ್ನು ಸರಿಪಡಿಸಿಕಳ್ಳಬೇಕು. ಮಕ್ಕಳ ಮೇಲಿನ ಜವಾಬ್ದಾರಿಯನ್ನು ಪೋಷಕರು‌ ಹೆಚ್ಚಿಸಿಕೊಳ್ಳುವುದು ಒಳಿತು ಎಂದರು.

ಬಂಟ್ವಾಳ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ
ನಿತ್ಯಾನಂದ ಬಂಡಾರಿ, ಉಡುಪಿ ನಿತ್ಯಾನಂದ ಮಂದಿರದ ಸುರೇಂದ್ರ ಶೆಟ್ಟಿ, ಬಂಟ್ವಾಳ ನಿತ್ಯಾನಂದ ಮಂದಿರದ ಯಶವಂತ, ಕೋ ಆಪರೇಟೀವ್ ಬ್ಯಾಂಕ್ ಅಡ್ಯನಡ್ಕ ಶಾಖಾ ಸಿಬ್ಬಂದಿ ರಾಮಕೃಷ್ಣ ಬಾಕಿಲಪದವು, ಬಾಗ್ಯಲಕ್ಷ್ಮಿ ರವಿಚಂದ್ರ ಕಣಂದೂರು, ಅಮಿತ ದೇವದಾಸ ಆಳ್ವ ಕುಂಬಳೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜೇಶ್ ಕೆ.ಟಿ ಸ್ವಾಗತಿಸಿದರು. ಪೃಥ್ವಿರಾಜ್ ಕಾಪಿಕ್ಕಾಡ್ ಕಾರ್ಯಕ್ರಮ ನಿರೂಪಿಸಿ, ದೇವದಾಸ್ ವಂದಿಸಿದರು.

LEAVE A REPLY

Please enter your comment!
Please enter your name here