ಪುತ್ತೂರು: ಟೈಲರ್ಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ವಿವಿಧ ಸವಲತ್ತಿನ ಸಹಕಾರಕ್ಕಾಗಿ ಕಳೆದ 24 ವರ್ಷಗಳಿಂದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಸರಕಾರದ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡುತ್ತಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟೈಲರ್ಗಳಿಗೆ ಕನಿಷ್ಠ ಜೀವನ ಭದ್ರತೆ ಒದಗಿಸುವ ಕ್ಷೇಮನಿಧಿ ದೊರೆಯದೇ ಇದ್ದು ಇದರ ಜಾರಿಗೂ ಸರ್ಕಾರ ಮೀನಾಮೇಷ ಎನಿಸುತ್ತಿರುವುದರಿಂದ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕೇಂದ್ರದಲ್ಲಿ ಜು.26ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಲಾಗುವುದು. ದ.ಕ.ಜಿಲ್ಲೆಯ 8 ಕ್ಷೇತ್ರಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮೂಲ್ಕಿ-ಮೂಡಬಿದಿರೆ, ಸುರತ್ಕಲ್ ಹಾಗೂ ಉಳ್ಳಾಲದ ಟೈಲರ್ ವೃತ್ತಿಬಾಂಧವರು ಭಾಗಹಿಸಲಿದ್ದಾರೆ. 15 ದಿನಗಳೊಳಗಾಗಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿ ಬಾಂಧವರು ಒಂದು ದಿನದ ಕೆಲಸ ಸ್ಥಗಿತಗೊಳಿಸಿ ಭಾಗವಹಿಸಬೇಕು ಎಂದು ಅಸೋಸಿಯೇಶನ್ ಪ್ರಕಟಣೆ ತಿಳಿಸಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.