ಪುತ್ತೂರಿನಲ್ಲಿ ನಡೆದ ಎರಡು ದಿನದ ಕರಾಟೆ ಶಿಬಿರದಲ್ಲಿ 12 ಮಂದಿಗೆ ಬ್ಲ್ಯಾಕ್ ಬೆಲ್ಟ್ ಪ್ರದಾನ

0

ಪುತ್ತೂರು: ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್ ಮತ್ತು ಬುಡೋ ಅಕಾಡೆಮಿ ಇವರ ವತಿಯಿಂದ ಇಲ್ಲಿನ ದಿನೇಶ್ ಭವನ ಹಾಲ್‌ನಲ್ಲಿ ಎರಡು ದಿನ ನಡೆದ ಕರಾಟೆ ಶಿಬಿರ ಹಾಗು ಬ್ಲ್ಯಾಕ್ ಬೆಲ್ಟ್ ಗ್ರೇಡಿಂಗ್‌ನಲ್ಲಿ ೧೨ ಮಂದಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ವಿತರಿಸಲಾಯಿತು.


ಪುತ್ತೂರಿನ ಲಾಸ್ಯ ಬಿ.ಶೆಟ್ಟಿ, ಶಾಂತಿಪ್ರಕಾಶ ಜೈನ್, ಶ್ರೇಯ ಎಂ., ಅಭಿನಂದನಾ, ವರುಣ್ ಎ., ಜಸ್ಮಿತಾ ಕೆ. ಕೆಯ್ಯೂರು, ಹಿತೇಶ್ ಪಿ.ಬಿ. ಕೆಯ್ಯೂರು, ಸ್ನೇಹ ಬಿ. ಸುಳ್ಯಪದವು, ಮಂಗಳೂರಿನ ರೂಪಾ ಶೆಟ್ಟಿ, ವರುಣ್ ಬಿ. ಕಾರಂತ್, ಕ್ರಿಸ್ ಪಿಂಟೋರವರಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ವಿತರಿಸಲಾಯಿತು. ಬುಡೋ ಅಕಾಡೆಮಿಯ ರಾಷ್ಟ್ರೀಯ ಮುಖ್ಯ ತಾಂತ್ರಿಕ ನಿರ್ದೇಶಕರಾಗಿರುವ ಚೆನ್ನೈಯ ಕ್ಯೋಶಿ ಕರಾಟೆ ಎನ್. ಮೋಹನ್ ಹಾಗೂ ಸೆನ್‌ಸಾಯಿ ಮುರಳಿರವರು ಶಿಬಿರ ನಡೆಸಿ ಬ್ಲ್ಯಾಕ್ ಬೆಲ್ಟ್ ಗ್ರೇಡಿಂಗ್ ಮಾಡಿದರು. ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್‌ನ ಮುಖ್ಯ ಶಿಕ್ಷಕ ಶಿಹಾನ್ ಟಿ.ಡಿ.ಥೋಮಸ್, ಶಿಕ್ಷಕರುಗಳಾದ ತಾರನಾಥ ಹೊಸೋಳಿಕೆ, ಶೇಖರ್ ಮಾಡಾವು, ಜಗದೀಶ ಆಚಾರ್ಯ, ಸಂಪ್ರೀತಾ, ಕೆವಿನ್ ತೋಮಸ್, ಅಜಯ್‌ನಾಥ್, ಜಿನಪ್ರಕಾಶ್ ಜೈನ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here